ಚಲನಚಿತ್ರದ ಕಥಾ ಹಂದರದಂತೆ ವಿವಾಹದ ವೇಳೆ ವರನ ಬೊಕ್ಕ ತಲೆ ನೋಡಿ ವಧು ಕುಸಿದು ಕುಳಿತ ಪ್ರಸಂಗವೊಂದು ನಡೆದಿದೆ. ಉತ್ತರ ಪ್ರದೇಶದ ಇಟಾವಾದಲ್ಲಿ ಈ ಘಟನೆ ನಡೆದಿದ್ದು, ಮದುವೆಯ ದಿನದಂದು ವರ ವಿಗ್ ಧರಿಸಿರುವುದನ್ನು ನೋಡಿದ ನಂತರ ಮದುವೆಯಾಗಲು ವಧು ನಿರಾಕರಿಸಿದಳು.
ಆಯುಷ್ಮಾನ್ ಖುರಾನಾ ಅವರ 2019 ರ ಚಲನಚಿತ್ರ ‘ಬಾಲಾ’ ಅನ್ನು ನೆನಪಿಸುವಂತೆಯೇ ಅಲ್ಲಿ ಘಟನೆ ನಡೆದಿದೆ. ಅಕಾಲಿಕ ಬೋಳಿನಿಂದ ಬಳಲುತ್ತಿರುವ ಮತ್ತು ಮದುವೆಯಾಗಲು ತನ್ನ ಹೆಂಡತಿಯಿಂದ ಅದನ್ನು ಮರೆಮಾಡುವ ವ್ಯಕ್ತಿಯ ಕಥೆಯದು.
ವರ ಬೋಳು ಮರೆಮಾಚಲು ವಿಗ್ ಬಳಸುತ್ತಿರುವುದನ್ನು ವಧು ಪತ್ತೆ ಹಚ್ಚಿದ್ದು, ಮಾಲೆ ವಿನಿಮಯ ಸಮಾರಂಭ ನಡೆಯುತ್ತಿರುವಾಗ, ವರ ಅಜಯ್ ಕುಮಾರ್ ಹೆಚ್ಚು ಜಾಗರೂಕರಾಗಿ ಮತ್ತು ಪದೇ ಪದೇ ತನ್ನ ಸಾಂಪ್ರದಾಯಿಕ ಪೇಟ ಸರಿಪಡಿಸಿಕೊಳ್ಳುವುದನ್ನು ವಧು ಗಮನಿಸಿದ್ದಳು.
ಆಕೆಯ ಅನುಮಾನ ಹೆಚ್ಚಿರುವಂತೆಯೇ ವರನಿಗೆ ನಿಜವಾಗಿಯೂ ಬೋಳು ಮತ್ತು ತಲೆಗೆ ವಿಗ್ ಹಾಕಲಾಗಿದೆ ಎಂದು ವಧುವಿಗೆ ಯಾರೋ ಹೇಳಿದರು. ಇದನ್ನು ಕೇಳಿದ ವಧು ಪ್ರಜ್ಞೆ ತಪ್ಪಿ ವೇದಿಕೆಯ ಮೇಲೆ ಬಿದ್ದಳು.
ನಂತರ ಆಕೆಗೆ ಪ್ರಜ್ಞೆ ಬಂದ ಬಳಿಕ ಆ ವರನನ್ನು ಮದುವೆಯಾಗಲು ನಿರಾಕರಿಸಿದಳು. ವರನು ಮದುವೆಯಾಗದೆ ಮನೆಗೆ ಮರಳಬೇಕಾಯಿತು. ಆಕೆಯ ಕುಟುಂಬದವರು ಅವಳನ್ನು ಮನವೊಲಿಸಲು ಸಾಧ್ಯವಾಗಲಿಲ್ಲ.
ಮಧ್ಯಪ್ರದೇಶದ ರೇವಾ ಜಿಲ್ಲೆಯಿಂದ ಅಂತಹುದೇ ಘಟನೆಯೊಂದು ನಡೆದಿದ್ದು, ಮದುವೆಯ ವಿಧಿ ವಿಧಾನಗಳ ಮಧ್ಯೆಯೇ ವರನ ಮಾನಸಿಕ ಸ್ಥಿತಿಯನ್ನು ಕಂಡು ವಧು ಮದುವೆಯಾಗಲು ನಿರಾಕರಿಸಿದ ಘಟನೆ ನಡೆದಿದೆ.
Real-Life Bala? UP Bride Faints After Finding Groom Wearing a Wig, Refuses to Marry Him