ಸಂಗೀತಕ್ಕೆ ದೇಶ, ಭಾಷೆ, ಧರ್ಮದ ಯಾವುದೇ ಎಲ್ಲೆಗಳಿಲ್ಲ ಎಂದು ಹೇಳಲಾಗುತ್ತದೆ. ಹೈದರಾಬಾದ್‌ನ ನವಾಬ್ ಸಾದಿಕ್ ಜಂಗ್ ಬಹದ್ದೂರ್ ರಚಿಸಿದ್ದು ಎನ್ನಲಾಗುವ ಈ ಕವ್ವಾಲಿಯು ಶ್ರೀ ಕೃಷ್ಣನನ್ನು ’ಕನ್ಹಯಾ’ ಎಂದು ಹಾಡಿ ಹೊಗಳಿದ್ದು, ದೇವರ ಮೇಲಿನ ಭಕ್ತಿ ಭಾವ ಪ್ರದರ್ಶಿಸುತ್ತದೆ. ಶ್ರೀಕೃಷ್ಣನ ಮೇಲೆ ರಚಿಸಲಾಗಿರುವ ಕವ್ವಾಲಿಯೊಂದು ಇದೇ ಮಾತನ್ನು ಮತ್ತೊಮ್ಮೆ ಸಾಬೀತು ಪಡಿಸುತ್ತದೆ.
ವಾಜಿಹಾ ಅಥೆರ್ ನಕ್ವಿ ಹೆಸರಿನ ನೆಟ್ಟಿಗರೊಬ್ಬರು ತಾವು ಈ ಕವ್ವಾಲಿ ಹಾಡುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.
“ರಮ್ಜಾನ್‌ನ ಸಂದರ್ಭದಲ್ಲಿ 19ನೇ ಶತಮಾನದ ಹೈದರಾಬಾದ್‌ನ ನವಾಬ್ ಸಾದಿಕ್ ಜಂಗ್ ಬಹದ್ದೂರ್ ಹಿಮ್‌ರ ಜನಪ್ರಿಯ ’ಕನ್ಹಯಾ’ವನ್ನು ಹಾಡಲು ಬಹಳ ಸಂತೋಷವಾಗುತ್ತಿದೆ,” ಎಂದು ಈ ಪೋಸ್ಟ್ ಶೇರ್ ಮಾಡಿದ್ದಾರೆ ವಾಜಿಹಾ.