ದೇಶದ ರಕ್ಷಣೆಗಾಗಿ ತಮ್ಮ ಅಮೂಲ್ಯ ಜೀವನ ಹಾಗೂ ಜೀವವನ್ನೇ ಮುಡಿಪಿಡುವ ಸೈನಿಕರ ಋಣ ತೀರಿಸುವುದು ಅಷ್ಟು ಸಲೀಸಲ್ಲ. ಸೈನಿಕರ ಸೇವೆ ಗುರುತಿಸುವ ಸಣ್ಣ ಸಣ್ಣ ಪ್ರಯತ್ನ ಅಲ್ಲಲ್ಲಿ ನಡೆಯುತ್ತದೆ. ಇದೀಗ ಹೀರೋ ಮೋಟೋ ಕಾರ್ಪ್ ವಿಶೇಷ ಪ್ರಯತ್ನ ಮಾಡಿದೆ.
ವಿಕಲಚೇತನ ಯೋಧರಿಗೆ ಹಿರೋ ಮೊಟೋ ಕಾರ್ಪ್ ಸ್ಕೂಟರ್ ನೀಡುತ್ತಿದ್ದು, ಭಾರತೀಯ ಸೇನೆಯ ನಿವೃತ್ತ ನೌಕರರ ನಿರ್ದೇಶನಾಲಯದೊಂದಿಗೆ ಈ ಸಂಬಂಧ ಒಡಂಬಡಿಕೆ ಮಾಡಿಕೊಂಡಿದೆ.
ಸೇನಾ ಯೋಧರ ಶ್ಲಾಘನೀಯ ಪ್ರಯತ್ನಗಳಿಗೆ ವಂದಿಸುವ ಪ್ರಯತ್ನವಾಗಿ ಸೇವೆಯಲ್ಲಿ ಅಂಗವೈಕಲ್ಯ ಹೊಂದಿದವರಿಗಾಗಿಯೇ ಹೀರೋ ಮೊಟೊ ಕಾರ್ಪ್ ಹೀರೋ ಡೆಸ್ಟಿನಿ 125 ಸ್ಕೂಟರ್‌ಗಳನ್ನು ಸಿದ್ಧಪಡಿಸಿದ್ದು, ಆರಂಭಿಕವಾಗಿ ಕೆಲವು ಸೈನಿಕರಿಗೆ ಹಸ್ತಾಂತರಿಸಿದ್ದಾರೆ.
ಹಿಂದಿ `ಕಿಚ್ಚಿ’ಗೆ ಮತ್ತಷ್ಟು ತುಪ್ಪ ಸುರಿದ ಬಿಹಾರ ವಿಮಾನ ನಿಲ್ದಾಣದ ಪೋಸ್ಟರ್
ಹೀರೋ ಡೆಸ್ಟಿನಿ 125 ಸ್ಕೂಟರ್‌ಗಳನ್ನು ಅಂಗವಿಕಲರಿಗೆ ಅನುಕೂಲವಾಗುವಂತೆ ಹಿಂಭಾಗದಲ್ಲಿ ಎರಡು ಸಹಾಯಕ ಚಕ್ರಗಳನ್ನು ಅಳವಡಿಸಲಾಗಿದೆ.
ಈ ರಿಟ್ರೋಫಿಟ್ ಮಾಡಿದ ಸ್ಕೂಟರ್‌ಗಳನ್ನು ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಂಜಾಬ್, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ತಮಿಳುನಾಡಿನ ಸೈನಿಕರಿಗೆ ನೀಡಲಾಗುತ್ತಿದೆ.
ಹೀರೋ ಡೆಸ್ಟಿನಿ 125ಯು 124.6ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್ ಬಿ ಚಾರ್ಜಿಂಗ್ ಸಾಕೆಟ್, ಅಂಡರ್ ಸೀಟ್ ಸ್ಟೋರೇಜ್ ಲೈಟ್ ಮತ್ತು ಸೈಡ್ ಸ್ಟ್ಯಾಂಡ್ ಇಂಡಿಕೇಟರ್‌ನಂತಹ ವೈಶಿಷ್ಟ್ಯ ಹೊಂದಿದೆ.