ಬೆಂಗಳೂರು: ಮದುವೆ ಸಿದ್ಧತೆಯಲ್ಲಿದ್ದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಬಿಜಿಎಸ್ ಲೇಔಟ್ ನ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿದೆ.
ಲೋಕನಾಥ್ ಸಿಂಗ್ (37) ಕೊಲೆಯಾಗಿರುವ ಉದ್ಯಮಿ. ಈತಿಂಗಳಾಂತ್ಯಕ್ಕೆ ಲೋಕನಾಥ್ ಸಿಂಗ್ ವಿವಾಹ ನಿಶ್ಚಯವಾಗಿತ್ತು. ಮದುವೆಯ ಸಿದ್ಧತೆಯಲ್ಲಿದ್ದ ಲೋಕನಾಥ್ ಅವರನ್ನು ದುಷ್ಕರ್ಮಿಗಳು ಚಾಕುವಿನಿಂದ ಕುತ್ತಿಗೆ ಭಾಗಕ್ಕೆ ಇರಿದು ಹತ್ಯೆ ಮಾಡಿದ್ದಾರೆ.
ಘಟನೆ ಬಳಿಕ ಲೋಕನಾಥ್ ಗನ್ ಮ್ಯಾನ್ ನಾಪತ್ತೆಯಾಗಿದ್ದ. ಆದರೆ ಇದೀಗ ಗನ್ ಮ್ಯಾನ್ ಏಕಾಏಕಿ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷನಾಗಿದ್ದಾನೆ. ಆತನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿದ್ದಾರೆ. ಕೊಲೆ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.