ಧಾರವಾಡ: ಧಾರವಾಡದ ರಿಯಲ್ ಎಸ್ಟೇಟ್ ಉದ್ಯಮಿ ಗಿರೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಗರಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಂಡೋಬಾ ಪಟದಾರಿ (26), ಆಕಾಶ ಮಾದಪ್ಪನವರ್ (19), ಪ್ರಜ್ವಲ ವಡ್ಡರ (19) ಮಂಜುನಾಥ್ ಚಿಕ್ಕೊಪ್ಪ (20) ಬಂಧಿತ ಆರೋಪಿಗಳು.
ಎರಡು ದಿನಗಳ ಹಿಂದೆ ಧಾರವಡ ತಾಲೂಕಿನ ಗರಗ ಗ್ರಾಮದಲ್ಲಿ ಗಿರೀಶ್ ಕರಡಿಗುಡ್ಡ ಎಂಬುವವರನ್ನು ಮನೆಯಲ್ಲಿಯೇ ಕೊಚ್ಚಿ ಕೊಲೆ ಮಾಡಲಾಗಿತ್ತು. ಆರಂಭದಲ್ಲಿ ಕೌಟುಂಬಿಕ ಕಲಹದಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ತನಿಖೆ ನಡೆಸಿದ ಪೊಲೀಸರಿಗೆ ಕೊಲೆಯಾದ ಗಿರೀಶ್ ಹಾಗೂ ಆರೋಪಿಗಳಿಗೆ ಈ ಹಿಂದೆ ಜಗಳವಾಗಿತ್ತು. ಇದೇ ವೈಷಮ್ಯಕ್ಕೆ ಕೊಲೆ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ.