ತ್ವಚೆಯ ಆರೈಕೆ ಮಾಡಿಕೊಳ್ಳಬೇಕು ಎಂಬ ಆಸೆ ಅನೇಕರಿಗೆ ಇದ್ದರೂ ಸಹ ಸ್ಕಿನ್ ಕೇರ್ ಪ್ರಾಡಕ್ಟ್ಗಳ ದುಬಾರಿ ಬೆಲೆಯು ಈ ಯೋಚನೆಯನ್ನು ಕೈಬಿಡುವಂತೆ ಮಾಡಿಬಿಡುವ ಸಾಧ್ಯತೆ ಇರುತ್ತೆ. ಕೆಲವರಿಗೆ ಬಿಡುವೇ ಇಲ್ಲದ ಕಾರಣ ಮುಖಕ್ಕೆ ಏನನ್ನು ಹಚ್ಚಬೇಕು ಎಂಬುದರೆ ಬಗ್ಗೆ ಚಿಂತಿಸಲು ಆಗದೇ ಕೂಡ ಇರಬಹುದು.
ದೀಪಾವಳಿ ಹಬ್ಬ ಬೇರೆ ಹತ್ತಿರ ಬರ್ತಿದೆ. ಹಬ್ಬಕ್ಕೆ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವ ಮುನ್ನ ನಿಮ್ಮ ತ್ವಚೆಯ ಆರೈಕೆ ವಹಿಸೋದು ತುಂಬಾನೇ ಮುಖ್ಯ. ಮೇಕಪ್ ಮಾಡುವ ಮುನ್ನ ತ್ವಚೆಯನ್ನು ಅದಕ್ಕೆ ಸಿದ್ಧಪಡಿಸುವುದು ಕೂಡ ಮುಖ್ಯ. ಹಾಗಾದರೆ ಮನೆಯಲ್ಲೇ ಯಾವ ಫೇಸ್ಪ್ಯಾಕ್ನ ಧರಿಸಬಹುದು ಎಂಬುದಕ್ಕೆ ಇಲ್ಲಿದೆ ಮಾಹಿತಿ.
ಸಾಮಾನ್ಯವಾಗಿ ಎಲ್ಲರ ತ್ವಚೆಯಲ್ಲಿ ಟ್ಯಾನ್ ಆಗಿರುತ್ತೆ. ಇಂತಹ ಸಂದರ್ಭದಲ್ಲಿ ನಿಮ್ಮ ಮುಖವನ್ನು ಆರೈಕೆ ಮಾಡಲು ನಿಮಗೆ ಇಲ್ಲೊಂದು ಸ್ಪೆಷಲ್ ಫೇಸ್ಪ್ಯಾಕ್ ಇದೆ.
ಬೇಕಾಗುವ ಸಾಮಗ್ರಿ : ಟೊಮ್ಯಾಟೋ, ಸೌತೆಕಾಯಿ.
ಸಣ್ಣ ಟೊಮ್ಯಾಟೋ ಹಾಗೂ ಅರ್ಧ ಕತ್ತರಿಸಿದ ಸೌತೆಕಾಯಿಯನ್ನು ತೆಗೆದುಕೊಳ್ಳಿ. ಸೌತೆಕಾಯಿಯನ್ನು ಚಿಕ್ಕದಾಗಿ ತುರಿಯಿರಿ.
ಇದಕ್ಕೆ ಟೊಮ್ಯಾಟೋ ರಸವನ್ನು ಹಿಂಡಿರಿ. ಎರಡನ್ನೂ ಚೆನ್ನಾಗಿ ಕಲಿಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಮುಖವನ್ನು ಹಾಗೆಯೇ ಇಡಿ. ಬಳಿಕ ಶುದ್ಧ ನೀರಿನಲ್ಲಿ ಮುಖ ತೊಳೆದುಕೊಳ್ಳಿ.
ಇದನ್ನು ಬಿಟ್ಟು ನೀವು ಜೇನುತುಪ್ಪ ಹಾಗೂ ಕ್ಯಾರೆಟ್ನ್ನು ಬಳಸಿಯೂ ಫೇಸ್ಪ್ಯಾಕ್ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ. ಮಧ್ಯಮ ಗಾತ್ರದ ಕ್ಯಾರಟ್ ತೆಗೆದುಕೊಂಡು ಅದನ್ನು ರುಬ್ಬಿಕೊಳ್ಳಿ.
ಇದಕ್ಕೆ 1 ದೊಡ್ಡ ಚಮಚದಲ್ಲಿ ಜೇನುತುಪ್ಪವನ್ನು ಸೇರಿಸಿ. ಈ ಮಾಸ್ಕ್ನ್ನು ಮುಖಕ್ಕೆ ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ಮುಖ ತೊಳೆದುಕೊಳ್ಳಿ. ಈ ಫೇಸ್ ಮಾಸ್ಕ್ ನಿಮ್ಮ ಮುಖವನ್ನು ಶುಚಿಗೊಳಿಸುವಲ್ಲಿ ಹೆಚ್ಚು ಸಹಕಾರಿ.