ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತನಗೆ ಮಂಜೂರು ಮಾಡಿದ್ದ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ಶನಿವಾರ ರಾಹುಲ್ ಗಾಂಧಿ ಅವರು ತಮ್ಮ ಸರ್ಕಾರಿ ನಿವಾಸದ ಕೀಗಳನ್ನು ಹಸ್ತಾಂತರಿಸಿದರು.
12 ತುಘಲಕ್ ಲೇನ್‌ನಲ್ಲಿರುವ ಬಂಗಲೆಯನ್ನು ಏಪ್ರಿಲ್ 22 ರೊಳಗೆ ಖಾಲಿ ಮಾಡುವಂತೆ ಲೋಕಸಭೆಯ ವಸತಿ ಸಮಿತಿಯು ರಾಹುಲ್ ಗಾಂಧಿಗೆ ನೋಟಿಸ್ ನೀಡಿತ್ತು. 2004 ರ ಸಾರ್ವತ್ರಿಕ ಚುನಾವಣೆಯಲ್ಲಿ ಅಮೇಠಿಯಲ್ಲಿ ಗೆದ್ದ ನಂತರದಿಂದ ಅವರು ಈ ಬಂಗಲೆಯಲ್ಲಿದ್ದರು.
ಮನೆ ಖಾಲಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಸತ್ಯ ಮಾತನಾಡಿದ್ದಕ್ಕೆ ಬೆಲೆ ಕೊಡುತ್ತಿದ್ದೇನೆ. ಸತ್ಯ ಮಾತನಾಡಿದ್ದಕ್ಕೆ ಯಾವುದೇ ಬೆಲೆ ತೆರಲು ಸಿದ್ಧ ಎಂದು ಹೇಳಿದ್ದಾರೆ.
ಸೋನಿಯಾ ಗಾಂಧಿ ಅವರ ನಿವಾಸವಾದ 10 ಜನಪಥ್‌ನಲ್ಲಿ ಕೆಲಕಾಲ ವಾಸ್ತವ್ಯ ಹೂಡುವುದಾಗಿ ತಿಳಿಸಿದ್ದಾರೆ.