ಮಾಸ್ಕೋ: ರಷ್ಯಾ ದಾಳಿಗೆ ಉಕ್ರೇನ್ ಪ್ರಬಲ ಪ್ರತಿರೋಧ ತೋರಿದರೂ ಅಕ್ಷರಶಃ ತತ್ತರಿಸಿದೆ. ಉಕ್ರೇನ್ ಪರವಾಗಿ ಹೋರಾಡುವಂತೆ ಯುರೋಪಿಯನ್ನರಿಗೆ ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಮನವಿ ಮಾಡಿದ್ದಾರೆ.
ಕೀವ್ ನಗರದ ಬಹುತೇಕ ಭಾಗ ರಷ್ಯಾ ಸೇನೆ ಹಿಡಿತಕ್ಕೆ ಸಿಲುಕಿದ್ದು, ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಬಂಕರ್ ಗೆ ತೆರಳಿದ್ದಾರೆ. ಉತ್ತರ ಕೀವ್ ಭಾಗದಲ್ಲಿ ರಷ್ಯಾ ಸೇನೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಅವರು ಬಂಕರ್ ಪ್ರವೇಶಿಸಿದ್ದಾರೆ.
ಉಕ್ರೇನ್ ಬಹುಭಾಗ ಅಕ್ಷರಶಃ ಸ್ಮಶಾನದಂತಾಗಿದೆ. ಯುದ್ಧದಿಂದಾಗಿ ಭಾರೀ ಹಾನಿ ಉಂಟಾದ ಹಿನ್ನಲೆಯಲ್ಲಿ ಝೆಲೆನ್ ಮಾತುಕತೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ಆಹ್ವಾನಿಸಿದ್ದಾರೆ.
ಉಕ್ರೇನ್ ಜೊತೆ ಮಾತುಕತೆಗೆ ಸಿದ್ಧ: ಕ್ಸಿ ಜಿನ್‌ಪಿಂಗ್ ಗೆ ಪುಟಿನ್ ಹೇಳಿಕೆ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಮಾತನಾಡಿ, ಉಕ್ರೇನ್ ನೊಂದಿಗೆ ಉನ್ನತ ಮಟ್ಟದ ಮಾತುಕತೆಯಲ್ಲಿ ತೊಡಗಿಸಿಕೊಳ್ಳಲು ರಷ್ಯಾ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಷರತ್ತು ವಿಧಿಸಿ ಮಾತುಕತೆಗೆ ಸಿದ್ಧ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿಕೆ ನೀಡಿದ್ದಾರೆ. ಈ ಮೂಲಕ ಉಕ್ರೇನ್ ಅಧ್ಯಕ್ಷರ ಮನವಿಗೆ ರಷ್ಯಾ ಅಧ್ಯಕ್ಷ ಸ್ಪಂದಿಸಿದ್ದು, ಉಕ್ರೇನ್ ಜೊತೆಗೆ ನಾವು ಮಾತುಕತೆಗೆ ಸಿದ್ಧವಿರುವುದಾಗಿ ಹೇಳಿದ್ದಾರೆ.