ಕಲ್ಲಂಗಡಿ ಹಣ್ಣಿನ ಸೀಸನ್ ಆರಂಭವಾಗಿದೆ. ಅದರ ಒಳಭಾಗ ಮಾತ್ರ ಸೇವಿಸಿ ಹೊರಗಿನ ದಪ್ಪಗಿನ ಬಿಳಿ ಭಾಗವನ್ನು ಎಸೆಯದಿರಿ. ಇದು ತ್ವಚೆಗೆ ಅತ್ಯುತ್ತಮ ಕ್ಲೆನ್ಸರ್ ಆಗಿ ಕೆಲಸ ಮಾಡುತ್ತದೆ.
ಬಿಸಿಲಿಗೆ ಓಡಾಡಿದ ಪರಿಣಾಮ ನಿಮ್ಮ ತ್ವಚೆ ಕಳೆಗುಂದಿದ್ರೆ ಇದನ್ನು ಕಲ್ಲಂಗಡಿ ಹಣ್ಣಿನ ಸಿಪ್ಪೆ ಸರಿ ಮಾಡುತ್ತದೆ. ಇದು ತ್ವಚೆಗೆ ಅಂಟಿರುವ ಕೊಳೆಯನ್ನು ಹೋಗಲಾಡಿಸಿ ತ್ವಚೆಯನ್ನು ಶುದ್ಧವಾಗಿಸುತ್ತದೆ. ಇದರಿಂದ ಮೊಡವೆಗಳೂ ಕಡಿಮೆಯಾಗುತ್ತವೆ.
ವಯಸ್ಸಾದ ಮತ್ತು ತ್ವಚೆಯ ಮೇಲಿನ ಸುಕ್ಕಾದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಕಲ್ಲಂಗಡಿ ಸಿಪ್ಪೆಯನ್ನು ತ್ವಚೆಯ ಮೇಲೆ ಉಜ್ಜುವುದರಿಂದ ರಾಡಿಕಲ್ಸ್ ಗಳು ತಟಸ್ಥಗೊಂಡು ನೀರಿನ ಅಂಶ ಮತ್ತೆ ತುಂಬಿಕೊಳ್ಳುತ್ತದೆ. ಇದರಿಂದ ತ್ವಚೆ ಹೊಳಪು ಪಡೆದುಕೊಳ್ಳುತ್ತದೆ.
ಇದರ ಸೇವನೆಯಿಂದ ಕೊಬ್ಬು ಕರಗುತ್ತದೆ. ನಾರಿನಂಶ ದೇಹಕ್ಕೆ ಸಿಗುತ್ತದೆ. ಇದರ ಬಿಳಿ ಭಾಗವನ್ನು ಕತ್ತರಿಸಿ ಸಲಾಡ್ ಜೊತೆ ಬೆರೆಸಬಹುದು. ಪಲ್ಯ ಮಾಡಿಯೂ ತಿನ್ನಬಹುದು. ಮಳೆಗಾಲದಲ್ಲಿ ಇದನ್ನು ಹೆಚ್ಚು ಸೇವಿಸದೆ ಇರುವುದು ಒಳ್ಳೆಯದು.