ಬೆಳಿಗ್ಗೆ ಎದ್ದ ತಕ್ಷಣ ಅನೇಕರಿಗೆ ಟೀ ಬೇಕು. ಬೆಡ್ ಟೀ ಕುಡಿಯದೆ ಹೋದ್ರೆ ನಿದ್ದೆ ಹೋಗೋದಿಲ್ಲ ಎನ್ನುವವರಿದ್ದಾರೆ. ಟೀ ಕುಡಿಯೋದು ಹಾನಿಕಾರಕವೇನಲ್ಲ. ಆದ್ರೆ ಬಿಸಿ-ಬಿಸಿ ಟೀ ಸೇವಿಸೋದು ಒಳ್ಳೆಯದಲ್ಲ.
ಸಂಶೋಧನೆಯೊಂದರ ಪ್ರಕಾರ ಬಿಸಿ ಬಿಸಿ ಟೀ ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆಯಂತೆ. ಭಯಾನಕ ರೋಗಗಳಿಗೆ ತುತ್ತಾಗಬೇಕಾಗುತ್ತದೆಯಂತೆ.
ಬಿಸಿ ಬಿಸಿ ಟೀ ಕುಡಿಯುವುದರಿಂದ ಗಂಟಲು ಕ್ಯಾನ್ಸರ್ ಕಾಣಿಸಿಕೊಳ್ಳುವ ಅಪಾಯ ಹೆಚ್ಚಂತೆ. ಬಿಸಿ ಬಿಸಿ ಟೀ ಅಂಗಾಂಶಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಕ್ಯಾನ್ಸರ್ ಕಂಡು ಬರುತ್ತದೆ ಎಂದು ಸಂಶೋಧನೆ ಹೇಳಿದೆ.
ಬಿಸಿ ಬಿಸಿ ಟೀ ಕುಡಿಯುವ ಅಭ್ಯಾಸ ನಿಮಗೂ ಇದ್ದರೆ ಇಂದಿನಿಂದಲೇ ಬಿಟ್ಟುಬಿಡಿ. ತುಂಬಾ ಬಿಸಿ ಟೀ ಸೇವನೆ ಬಿಟ್ಟು ಸ್ವಲ್ಪ ತಣ್ಣಗಾದ ಬಳಿಕ ಟಿ ಸೇವನೆ ರೂಢಿ ಮಾಡಿಕೊಳ್ಳಿ.