
ಬೇಸಿಗೆ ಬರ್ತಿದ್ದಂತೆ ಬಿಸಿಲ ಧಗೆ ಹೆಚ್ಚಾಗುತ್ತದೆ. ಬಿಸಿಗೆ ಬಾಯಾರಿಕೆಯಾಗುವುದು ಸಾಮಾನ್ಯ. ಈ ಬಾಯಾರಿಕೆ ಹೋಗಲಾಡಿಸಲು ಅನೇಕರು ತಣ್ಣನೆಯ ನೀರು, ಪಾನೀಯವನ್ನು ಸೇವನೆ ಮಾಡ್ತಾರೆ. ಬೇಸಿಗೆಯಲ್ಲಿ ಐಸ್ ನೀರನ್ನು ಕುಡಿಯುವುದು ಅಪಾಯಕಾರಿ.
ಬೇಸಿಗೆಯಲ್ಲಿ ಐಸ್ ನೀರು ಕುಡಿಯುವುದ್ರಿಂದ ಕೊಬ್ಬು ಹೆಚ್ಚಾಗುತ್ತದೆ. ತೂಕ ಹೆಚ್ಚಾಗಲು ಶುರುವಾಗುತ್ತದೆ. ತಣ್ಣೀರು ಕುಡಿಯುವುದರಿಂದ ಚಯಾಪಚಯ ನಿಧಾನವಾಗುತ್ತದೆ. ಇದು ದೇಹದಲ್ಲಿ ದೌರ್ಬಲ್ಯ ಮತ್ತು ಆಲಸ್ಯವನ್ನು ಉಂಟು ಮಾಡುತ್ತದೆ. ಸೋಮಾರಿತನ ಹೆಚ್ಚಿಸುತ್ತದೆ.
ಬಿಸಿಲಿಗೆ ತಣ್ಣನೆ ನೀರು ಕುಡಿದಾಗ ಬಾಯಾರಿಕೆ ನೀಗಿದಂತೆ ಭಾಸವಾಗುತ್ತದೆ. ಆದ್ರೆ ನಿರ್ಜಲೀಕರಣ ಸಮಸ್ಯೆ ಹೆಚ್ಚಾಗುತ್ತದೆ.
ತಣ್ಣೀರು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ಕಾಡಬಹುದು. ತಣ್ಣೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಹದಗೆಡುತ್ತದೆ ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ.
ತಣ್ಣೀರು ಕುಡಿಯುವುದರಿಂದ ದೇಹದೊಳಗಿನ ಕೋಶಗಳು ಕುಗ್ಗುತ್ತವೆ. ಅದೇ ಸಮಯದಲ್ಲಿ ಅದು ಚಯಾಪಚಯ ಮತ್ತು ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ ಹೃದಯಾಘಾತದ ಅಪಾಯವಿದೆ.
ತಣ್ಣೀರು ಕುಡಿಯುವುದರಿಂದ ಗಂಟಲು ನೋವು ಕಾಡುತ್ತದೆ. ಇದು ಮಾತ್ರವಲ್ಲದೆ ಟಾನ್ಸಿಲ್, ಶ್ವಾಸಕೋಶ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಗಳು ಕಾಡುತ್ತವೆ.