ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 4 ವಿಕೆಟ್ ಗಳ ರೋಚಕ ಜಯ ಗಳಿಸಿದೆ.
ಮೊದಲು ಬ್ಯಾಟ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 176 ರನ್ ಗಳಿಸಿತು. ಧವನ್ 45, ಜಿತೇಶ್ ಶರ್ಮಾ 27, ಪ್ರಭು ಸಿಮ್ರನ್ 25, ಸ್ಯಾಮ್ ಕರ್ರನ್ 23 ರನ್ ಗಳಿಸಿದರು. ಆರ್.ಸಿ.ಬಿ. ಪರ ಸಿರಾಜ್, ಮ್ಯಾಕ್ಸ್ವೆಲ್ ತಲಾ ಎರಡು ವಿಕೆಟ್ ಪಡೆದರು. ಗೆಲುವಿನ ಗುರಿ ಬೆನ್ನತ್ತಿದ ಆರ್‌ಸಿಬಿ 19.2 ಓವರ್ ಗಳಲ್ಲಿ 178 ರನ್ ಗಳಿಸಿ ಗೆಲುವು ಕಂಡಿದೆ. ವಿರಾಟ್ ಕೊಹ್ಲಿ 77, ಕಾರ್ತಿಕ್ ಅಜೇಯ 23 ರನ್ ಗಳಿಸಿದರು.
ವಿರಾಟ್ ಕೊಹ್ಲಿ ದಾಖಲೆ
100ನೇ ಅರ್ಧ ಶತಕ
ಟಿ20ಯಲ್ಲಿ ವಿರಾಟ್ ಕೊಹ್ಲಿ ನೂರನೇ 50 ಪ್ಲಸ್ ಸ್ಕೋರ್ ದಾಖಲೆ ಬರೆದಿದ್ದಾರೆ. ಪಂಜಾಬ್ ವಿರುದ್ಧ 77 ರನ್ ಗಳಿಸಿದ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ನಲ್ಲಿ 100ನೇ 50 ಪ್ಲಸ್ ಸ್ಕೋರ್ ಮೈಲಿಗಲ್ಲು ಸಾಧಿಸಿದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಮತ್ತು ವಿಶ್ವದ ಮೂರನೇ ಬ್ಯಾಟರ್ ಅವರಾಗಿದ್ದಾರೆ. ಕ್ರಿಸ್ ಗೇಲ್ 110 ಸಾರಿ, ಡೇವಿಡ್ ವಾರ್ನರ್ 109 ಬಾರಿ 50 ಪ್ಲಸ್ ಸ್ಕೋರ್ ಮಾಡಿದ್ದಾರೆ. ರೋಹಿತ್ ಶರ್ಮಾ 81 ಬಾರಿ ಸಾಧನೆ ಮಾಡಿದ ಎರಡನೇ ಭಾರತೀಯ ಬ್ಯಾಟರ್ ಆಗಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 25ನೇ ಅರ್ಧ ಶತಕ
ವಿರಾಟ್ ಕೊಹ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 25 ನೇ ಅರ್ಧ ಶತಕ ಗಳಿಸಿದ್ದು, ಕ್ರೀಡಾಂಗಣವೊಂದರಲ್ಲಿ ಗರಿಷ್ಠ ಅರ್ಧ ಶತಕವಾಗಿದೆ. ವಾರ್ನರ್ ಹೈದರಾಬಾದ್ ನಲ್ಲಿ 18, ವಿಲಿಯರ್ಸ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, 16 ರೋಹಿತ್ ಶರ್ಮಾ ಮುಂಬೈನ ವಾಂಖೆಡೆಯಲ್ಲಿ 15 ಬಾರಿ ಈ ಸಾಧನೆ ಮಾಡಿದ್ದಾರೆ.
ಐಪಿಎಲ್ ನಲ್ಲಿ 51ನೇ ಅರ್ಥ ಶತಕ
ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ 50ನೇ ಅರ್ಧ ಶತಕ ಬಾರಿಸಿದ್ದಾರೆ. ಇದು ಭಾರತೀಯರ ಪರಿ ಗರಿಷ್ಟ ಅರ್ಧ ಶತಕವಾಗಿದೆ. ಶಿಖರ್ ಧವನ್ 50 ಅರ್ಧಶತಕ ಬಾರಿಸಿದ್ದಾರೆ.
174 ಕ್ಯಾಚ್ ಪಡೆದ ಕೊಹ್ಲಿ
ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ನಲ್ಲಿ 174 ಕ್ಯಾಚ್ ಪಡೆದಿದ್ದಾರೆ. ಅವರು ಭಾರತೀಯ ಫೀಲ್ಡರ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ. ಸುರೇಶ್ ರೈನಾ 172 ಕ್ಯಾಚ್ ಪಡೆದಿದ್ದಾರೆ.