
ಐಪಿಎಲ್ ಪಂದ್ಯಗಳು ದಿನೇ ದಿನೇ ಕುತೂಹಲ ಕೆರಳಿಸುತ್ತಿದ್ದು, ಪ್ಲೇ ಆಫ್ ತಲುಪಲು ಸಾಕಷ್ಟ ಕಸರತ್ತು ನಡೆಸುತ್ತಿವೆ. ಈ ಬಾರಿಯ ಐಪಿಎಲ್ ಅಂಕಪಟ್ಟಿಯಲ್ಲಿ ಟೇಬಲ್ ಟಾಪರ್ ಆಗಿರುವ ರಾಜಸ್ಥಾನ್ ರಾಯಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ಲೇ ಆಫ್ ಸ್ಥಾನವನ್ನು ಈಗಾಗಲೇ ಖಚಿತಪಡಿಸಿಕೊಂಡಿವೆ.
ನಾಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದ್ದು, ಈ ರೋಮಾಂಚನಕಾರಿ ಪಂದ್ಯವನ್ನು ನೋಡಲು ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಮತ್ತು ಲಕ್ನೋ ಈ ಮೂರು ತಂಡಗಳು ಈಗಾಗಲೇ ಆರು ಪಂದ್ಯಗಳಲ್ಲಿ ಜಯಭೇರಿಯಾಗಿದ್ದು, ರನ್ ರೇಟ್ ಆಧಾರದಿಂದ ಮೇಲೆ ಕೆಳಗೆ ಇದ್ದಾರೆ. ಈ ಮೂರು ತಂಡಗಳು ದೊಡ್ಡ ಅಂತರದಿಂದ ಒಂದೊಂದು ಪಂದ್ಯದಲ್ಲಿ ಸೋಲನುಭವಿಸಿದರೆ ಆರ್ಸಿಬಿ ತಂಡಕ್ಕೆ ಪ್ಲೇ ಆಫ್ ತಲುಪುವ ಅವಕಾಶ ಸಿಗುವ ಸಾಧ್ಯತೆ ಇರಲಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ ತಂಡ ನಾಳೆಯ ಪಂದ್ಯದಲ್ಲಿ ಗೆದ್ದು ಆರ್ ಸಿ ಬಿ ತಂಡದ ಪ್ಲೇ ಆಫ್ ಆಸೆಯನ್ನು ನುಚ್ಚುನೂರು ಮಾಡಲಿದೆಯಾ ಕಾದು ನೋಡಬೇಕಾಗಿದೆ.