ಐಪಿಎಲ್ 2022ರ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚಿದೆ. ಇದಕ್ಕೆ ಕಾರಣ ಎರಡು ಹೊಸ ತಂಡಗಳ ಸೇರ್ಪಡೆ ಹಾಗೂ ಮೆಗಾ ಹರಾಜು. ಮೆಗಾ ಹರಾಜಿನ ನಂತ್ರ ಅನೇಕ ಆಟಗಾರರ ತಂಡ ಬದಲಾಗಲಿದೆ. ಹರಾಜಿಗೆ ಮೊದಲು ಎಲ್ಲ ತಂಡಗಳಿಗೆ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡಿದೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಮೊಹಮ್ಮದ್ ಸಿರಾಜ್ ತಂಡದಲ್ಲಿದ್ದಾರೆ. ಆದ್ರೆ ಅನೇಕ ಪಂದ್ಯಗಳ ಗೆಲುವಿಗೆ ಕಾರಣವಾಗಿರುವ ಆಟಗಾರನನ್ನು ತಂಡ ಕೈಬಿಟ್ಟು ಎಲ್ಲರಿಗೂ ಶಾಕ್ ನೀಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಈವರೆಗೂ ಐಪಿಎಲ್ ಕಪ್ ಎತ್ತಿಲ್ಲ. ಪ್ರತಿ ಬಾರಿ ಕಪ್ ನಮ್ಮದೆ ಎನ್ನುವ ಬೆಂಗಳೂರಿಗರಿಗೆ ಪ್ರತಿ ಬಾರಿ ನಿರಾಸೆಯಾಗಿದೆ. 2022ರಲ್ಲಿ ತಂಡ ಬದಲಾಗಲಿದ್ದು, ಬೆಂಗಳೂರಿಗೆ ಕಪ್ ಸಿಗಬಹುದೆಂಬ ಆಸೆಯಿತ್ತು. ಆದ್ರೆ ತಂಡದ ಮಹತ್ವದ ನಿರ್ಧಾರ, ಗೆಲುವಿನ ದಾರಿಯನ್ನು ದೂರ ಮಾಡಿದಂತೆ ಕಾಣ್ತಿದೆ.
ಆರ್ಸಿಬಿ, ಹರ್ಷಲ್ ಪಟೇಲ್ ರನ್ನು ತಂಡದಿಂದ ಹೊರ ಹಾಕಿದೆ. ವೇಗಿ ಹರ್ಷಲ್ ಪಟೇಲ್ ಕಿಲ್ಲರ್ ಬೌಲಿಂಗ್ ಮೂಲಕ ಎದುರಾಳಿ ತಂಡದ ಬ್ಯಾಟ್ಸ್ ಮನ್ ಗಳ ಬೆವರಿಳಿಸಿದ್ದರು. ಬಹುತೇಕ ಪಂದ್ಯಗಳಲ್ಲಿ ಆರ್‌ಸಿಬಿಯ ಮ್ಯಾಚ್ ವಿನ್ನರ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರು ಐಪಿಎಲ್ 2021 ರಲ್ಲಿ ಆಡಿದ 15 ಪಂದ್ಯಗಳಲ್ಲಿ 14.34 ರ ಸರಾಸರಿಯಲ್ಲಿ ಮತ್ತು 8.14 ರ ಸ್ಟ್ರೈಕ್ ರೇಟ್‌ನಲ್ಲಿ 32 ವಿಕೆಟ್‌ಗಳನ್ನು ಪಡೆದಿದ್ದಾರೆ.
ಐಪಿಎಲ್ 2021 ರಲ್ಲಿ, ಹರ್ಷಲ್ ಪಟೇಲ್ ಮುಂಬೈ ಇಂಡಿಯನ್ಸ್ ವಿರುದ್ಧ ಹ್ಯಾಟ್ರಿಕ್ ಬಾರಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು. 16ನೇ ಓವರ್ ನಲ್ಲಿ ಸತತ 3 ಎಸೆತಗಳಲ್ಲಿ ಹಾರ್ದಿಕ್ ಪಾಂಡ್ಯ, ಕೀರಾನ್ ಪೊಲಾರ್ಡ್ ಹಾಗೂ ರಾಹುಲ್ ಚಹಾರ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದ್ದರು.
ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಹರ್ಷಲ್ ಪಟೇಲ್ ರಾಂಚಿಯಲ್ಲಿ ನಡೆದ ಎರಡನೇ ಟಿ 20 ಯಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದರು. ಇದರ ನಂತರ, ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ಗೇಮ್‌ಚೇಂಜರ್ ಪ್ರಶಸ್ತಿ ಪಡೆದರು.