ಬೆಂಗಳೂರು : ಐಪಿಎಲ್ 17 ನೇ ಆವೃತ್ತಿ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಇದರ ನಡುವೆ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ( ಆರ್ ಸಿ ಬಿ) ತಂಡದ ಹೆಸರು ಬದಲಾವಣೆಯ ಚರ್ಚೆ ನಡೆಯುತ್ತಿದೆ.
ಅಭಿಮಾನಿಗಳ ಕೂಗಿಗೆ ಕೊನೆಗೂ ಆರ್ಸಿಬಿ ಮಣಿದಿದ್ದು, ಚಾಲೆಂಜರ್ಸ್ ಬೆಂಗಳೂರು ಇದೀಗ ಹೆಸರು ಬದಲಾವಣೆಯ ಸೂಚನೆ ನೀಡಿದೆ. ಈ ಕುರಿತು ಆರ್ಸಿಬಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಮೂರು ಕೋಣಗಳನ್ನು ನಿಲ್ಲಿಸಲಾಗಿದ್ದು, ಪ್ರತಿಯೊಂದರ ಮೇಲೂ Royal, Challengers, Bangalore ಎನ್ನುವ ಪದಗಳನ್ನು ಬರೆಯಲಾಗಿದೆ . ಮೂರನೇ ಕೋಣದ ಬಳಿ ಬರುವ ರಿಷಬ್, Bangalore ಎಂದು ಬರೆಯಲಾಗಿದ್ದ ಕೋಣವನ್ನು ಇದು ಬೇಡ ಎಂದು ಕಳಿಸುತ್ತಾರೆ. ಕೊನೆಗೆ ಅರ್ಥ ಆಯ್ತಾ? ಎಂದು ಪ್ರಶ್ನಿಸುತ್ತಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಐಪಿಎಲ್ 2024ರ ಪಂದ್ಯಾವಳಿ ಆರಂಭಕ್ಕೆ ಮುನ್ನ ಆರ್ಸಿಬಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ವೇಳೆ ಹೆಸರು ಬದಲಾವಣೆ ಕುರಿತು ಅಧಿಕೃತ ಘೋಷಣೆಯಾಗಲಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಆಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರನ್ನು ಬದಲಾಯಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿದ್ಧತೆ ನಡೆಸುತ್ತಿದೆ ಎಂದು ಪೋಸ್ಟ್ ಮಾಡಲಾಗಿದೆ.