ನಿನ್ನೆ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ ನ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ತಂಡ ಮುಂಬೈ ಇಂಡಿಯನ್ಸ್ ಎದುರು ಕೇವಲ 5 ರನ್ ಗಳಿಂದ ರೋಚಕ ಜಯ ಸಾಧಿಸುವ ಮೂಲಕ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ನಾಳೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಫೈನಲ್ ನಡೆಯಲಿದ್ದು, ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ.
ಐಪಿಎಲ್ ನಲ್ಲಿ ಈಗಾಗಲೇ 16 ಸೀಸನ್ ಗಳಾದರೂ ಆರ್ಸಿಬಿ ತಂಡಕ್ಕೆ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ ಈ ಸಲ ಕಪ್ ನಮ್ದೇ ಎಂಬ ಭರವಸೆ ಮಾತ್ರ ನೀಡಿದ್ದಾರೆ. ವುಮೆನ್ಸ್ ಪ್ರೀಮಿಯರ್ ಲೀಗ್ ನಲ್ಲಿ ಆರ್‌ಸಿಬಿ ಮಹಿಳಾ ಆಟಗಾರ್ತಿಯರು ಟ್ರೋಫಿ ಗೆಲ್ಲುವ ಮೂಲಕ ಕನ್ನಡಿಗರಲ್ಲಿ ಸಂತಸ ತರಲಿದ್ದಾರ ಕಾದು ನೋಡಬೇಕಾಗಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ ತನ್ನ ಓಂ ಗ್ರೌಂಡ್ ನಲ್ಲಿ ಮಿಂಚುತ್ತಿದ್ದು, ನಾಳಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಲು ಸಜ್ಜಾಗಿದ್ದಾರೆ.