
ನಿನ್ನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ತನ್ನ ಹೋಂ ಗ್ರೌಂಡ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಎದುರು 18 ರನ್ ಗಳಿಂದ ಸೋಲನುಭವಿಸಿದೆ. ಮುಂಬೈ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮ ಬ್ಯಾಟಿಂಗ್ ನೋಡಲು ಅಭಿಮಾನಿಗಳ ದಂಡೆ ಬಂದಿದ್ದು, ಅರ್ಧ ಶತಕ ಸಿಡಿಸುವ ಮೂಲಕ ಭರ್ಜರಿ ಮನರಂಜನೆ ನೀಡಿದ್ದಾರೆ. ಮುಂದಿನ ಆವೃತ್ತಿಯಲ್ಲಿ ರೋಹಿತ್ ಶರ್ಮ ಮುಂಬೈ ಇಂಡಿಯನ್ಸ್ ತಂಡದಲ್ಲಿ ಇರಲಿದ್ದಾರಾ ಎಂಬುದೂ ಚರ್ಚೆಗೆ ಕಾರಣವಾಗಿದೆ.
ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಡಲಿವೆ. ಪ್ಲೇ ಆಫ್ ನ ನಾಲ್ಕನೇ ಸ್ಥಾನಕ್ಕಾಗಿ ಈ ತಂಡಗಳು ಇಂದು ಭರ್ಜರಿ ಹೋರಾಟ ನಡೆಸುತ್ತಿದ್ದು, ಈ ಪಂದ್ಯ ವೀಕ್ಷಣೆಯಲ್ಲಿ ದೊಡ್ಡ ದಾಖಲೆ ಬರೆಯುವ ಸಾಧ್ಯತೆ ಇದೆ. ಎಂ ಎಸ್ ಧೋನಿ ಈ ಬಾರಿ ಐಪಿಎಲ್ ಗೆ ವಿದಾಯ ಘೋಷಿಸುವ ಸಾಧ್ಯತೆ ಹೆಚ್ಚಿದ್ದು, ಇಂದು ಬೆಂಗಳೂರಿನ ಅಭಿಮಾನಿಗಳು ಧೋನಿ ಅವರ ಬ್ಯಾಟಿಂಗ್ ಅನ್ನು ಕಣ್ತುಂಬಿಕೊಳ್ಳಬಹುದಾಗಿದೆ.