ರಾಯಚೂರು: ನಾಲ್ಕು ಜಿಲ್ಲೆಗಳ ಹಾಲು ಉತ್ಪಾದಕ ರೈತರಿಗೆ ಒಕ್ಕೂಟ ಬರೆ ಎಳೆದಿದೆ. ಪ್ರತಿ ಲೀಟರ್ ಹಾಲಿನ ದರವನ್ನು 1.50 ರೂಪಾಯಿನಂತೆ ಇಳಿಸಿ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಲು ಒಕ್ಕೂಟ ಆದೇಶ ಹೊರಡಿಸಿದೆ. ಇದು ಹಾಲು ಉತ್ಪಾದಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಒಕ್ಕೂಟ ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಹಾಲಿನ ದರದಲ್ಲಿ ಕಡಿತ ಮಾಡಿ ಹಾಲು ಒಕ್ಕೂಟ ಆದೇಶ ಹೊರಡಿಸಿದೆ. ಒಕ್ಕೂಟಕ್ಕೆ ಆರ್ಥಿಕ ಸಂಕಷ್ಟವಿದೆ ಹಗಾಗಿ ಹಾಲು ಉತ್ಪಾದಕರಿಗೆ ನಿಡುವ ದರದಲ್ಲಿ 1.50 ರೂ ಕಡಿತ ಮಡಲಾಗಿದೆ ಎಂದು ಒಕ್ಕುಟ ಸಮಜಾಯಿಷಿ ನೀಡುತ್ತಿದೆ.
ಇದರಿಂದ ನಲಕು ಜಿಲ್ಲೆಗಳ ಹಾಲು ಉತ್ಪಾದಕ ರೈತರು ಪ್ರತಿಭಟಿಸಿದ್ದು, ತಕ್ಷಣ ದರ ಇಳಿಕೆ ಮಾಡಿರುವ ಕ್ರಮ ಒಕ್ಕೂಟ ಹಿಂಪಡೆಯಬೇಕು. ಇಲ್ಲವಾದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.