ಬೆಂಗಳುರು : ರೈತ ಸಮುದಾಯಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಿಹಿಸುದ್ದಿ ನೀಡಿದ್ದು, ರೈತರ ಬಡ್ಡಿ ಸಹಾಯಧನದ ಬೆಳೆಸಾಲ ಯೋಜನೆಯನ್ನು ಕೃಷಿ ಸಂಬಂಧಿತ ಇತರ ಚಟುವಟಿಕೆಗಳಿಗೂ ವಿಸ್ತರಣೆ ಮಾಡಿದೆ.
ಆರ್ ಬಿಐ ಹೊಸ ಮಾರ್ಗಸೂಚಿ ಪ್ರಕಾರ, ಬೆಳೆ ಸಾಲ ಯೋಜನೆಯನ್ನು ಕೃಷಿ ಸಂಬಂಧಿತ ಇತರ ಚಟುವಟಿಕೆಗಳಿಗೂ ವಿಸ್ತರಣೆ ಮಾಡಿದ್ದು, ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ, ಕೋಳಿ, ಕುರಿ, ಜೇನು ಸಾಕಾಣಿಕೆ ಚಟುವಟಿಕೆಗಳಿಗೆ ಬಡ್ಡಿ ಸಹಾಯಧನ ಸಿಗಲಿದೆ.
ಅಲ್ಪಾವಧಿ ಬೆಳೆ ಸಾಲ ಪಡೆದ ರೈತರು ನಿಗದಿತ ಕಾಲಮಿತಿಯೊಳಗೆ ಮರುಪಾವತಿಸಿದ್ರೆ ಶೇ. 3 ರಷ್ಟು ಬಡ್ಡಿ ರಿಯಾಯಿತಿ ದೊರೆಯುತ್ತದೆ. ಅಂದರೆ ಶೇ 4 ರ ಬಡ್ಡಿ ದರದಲ್ಲಿ ಗರಿಷ್ಟ 3 ಲಕ್ಷ ರೂ.ಗಳ ತನಕ ಬಡ್ಡಿ ಸಹಾಯಧನ ಸಾಲ ಪಡೆಯಬಹುದಾಗಿದೆ.