ಮುಂಬೈ: 2 ಸಾವಿರ ರೂಪಾಯಿ ಮುಖಬೆಲೆ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರ ಪರಿಣಾಮ ಬೀರಿದ್ದು, ಕರೆನ್ಸಿ ಚಲಾವಣೆಯಲ್ಲಿ ಕಂಡುಬರುವ ಏರಿಕೆಗೆ ಬ್ರೇಕ್ ಬಿದ್ದಿದೆ ಎಂದು ಆರ್‌ಬಿಐ ತಿಳಿಸಿದೆ.
ಕಳೆದ ವರ್ಷ 2023ರ ಫೆಬ್ರವರಿ 9ರಂದು ಮುಕ್ತಾಯವಾದ ವಾರದಲ್ಲಿ ಬದಲಾವಣೆಯಲ್ಲಿ ಏರಿಕೆ ಪ್ರಮಾಣ ಶೇಕಡ 8.2ರಷ್ಟು ದಾಖಲಾಗಿತ್ತು. 2024 ರ ಫೆಬ್ರವರಿ 9 ಕ್ಕೆ ಮುಕ್ತಾಯಗೊಂಡ ವಾರದಲ್ಲಿ ಏರಿಕೆ ಪ್ರಮಾಣ ಶೇಕಡ 3.7ಕ್ಕೆ ಕುಸಿತವಾಗಿದೆ ಎಂದು ಆರ್.ಬಿ.ಐ. ಮಾಹಿತಿ ನೀಡಿದ.
ಇದರೊಂದಿಗೆ 2024ರ ಜನವರಿ 31ರ ವೇಳೆಗೆ ಶೇಕಡ 97.5 ರಷ್ಟು 2,000 ರೂ. ಮುಖಬೆಲೆಯ ನೋಟುಗಳು ಮರಳಿ ಬ್ಯಾಂಕ್ ಗಳಿಗೆ ಜಮೆಯಾಗಿದ್ದು, 8897 ಕೋಟಿ ರೂ. ಮೌಲ್ಯದ ನೋಟುಗಳು ಇನ್ನೂ ಜನರ ಬಳಿ ಇದೆ. 2023ರ ಮೇ 19 ರಂದು 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಆರ್‌ಬಿಐ ತಿಳಿಸಿತ್ತು.