ನವದೆಹಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸಂಸ್ಥೆಗೆ(PPBL) ಸಂಬಂಧಿಸಿದಂತೆ ಇತ್ತೀಚೆಗೆ ಹೊರಡಿಸಿದ ಆದೇಶದಿಂದ ಪೇಟಿಎಂ ಆಪ್ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.
ಆರ್.ಬಿ.ಐ. ಉಪ ಗವರ್ನರ್ ಸ್ವಾಮಿನಾಥನ್ ಜೆ. ಹಣಕಾಸು ನೀತಿ ಸಮಿತಿ ಸಭೆಯ ಬಳಿಕ ಮಾಹಿತಿ ನೀಡಿ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಆರ್‌ಬಿಐ ಕ್ರಮ ಕೈಗೊಂಡಿದೆ ಹೊರತೂ ಪೇಟಿಎಂ ಆಪ್ ವಿರುದ್ಧ ಅಲ್ಲ ಎಂದು ತಿಳಿಸಿದ್ದಾರೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಜೊತೆ ಸಹಯೋಗ ಹೊಂದಿರುವುದು ಆರ್‌ಬಿಐನ ನಿರ್ಧಾರವಾಗಿದೆ ಎಂದು ಹೇಳುವ ಮೂಲಕ ವಿಚಾರದಲ್ಲಿ ಆರ್‌ಬಿಐ ಸ್ವಾಯತ್ತೆಯನ್ನು ಎತ್ತಿ ಹಿಡಿದಿದ್ದಾರೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗೆ ಆರ್.ಬಿ.ಐ. ಹೊರಡಿಸಿದ ಆದೇಶದಿಂದ ಅಪ್ಲಿಕೇಶನ್ ಮೇಲೆ ಯಾವುದೇ ಪರಿಣಾಮವಿಲ್ಲ ಎಂದು ತಿಳಿಸಿದ್ದಾರೆ.