ಭಾರತೀಯ ರಿಸರ್ವ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಹಾಗೂ ಗ್ರಾಹಕರಿಗೆ ನೆಮ್ಮದಿ ಸುದ್ದಿ ನೀಡಿದೆ. ಎಚ್ಡಿಎಫ್ಸಿ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ವಿತರಣೆಯ ಮೇಲಿನ ನಿಷೇಧವನ್ನು ರಿಸರ್ವ್ ಬ್ಯಾಂಕ್ ತೆಗೆದುಹಾಕಿದೆ. ಕಳೆದ 8 ತಿಂಗಳಿಂದ ಬ್ಯಾಂಕ್, ಕ್ರೆಡಿಟ್ ಕಾರ್ಡ್ ನೀಡುವುದನ್ನು ನಿಷೇಧಿಸಲಾಗಿತ್ತು. ಇನ್ಮುಂದೆ ಬ್ಯಾಂಕ್ ಮತ್ತೆ ಹೊಸ ಕ್ರೆಡಿಟ್ ಕಾರ್ಡ್ ನೀಡಬಹುದು.
ಕಳೆದ ಎರಡು ವರ್ಷಗಳಲ್ಲಿ, ಡಿಜಿಟಲ್ ಬ್ಯಾಂಕಿಂಗ್, ಕಾರ್ಡ್ ಮತ್ತು ಬ್ಯಾಂಕಿನ ಪ್ಲಾಟ್ಫಾರ್ಮ್ನಲ್ಲಿ ಪಾವತಿಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ರಿಸರ್ವ್ ಬ್ಯಾಂಕ್ ಕಳೆದ ವರ್ಷ ಡಿಸೆಂಬರ್ 3 ರಂದು ಕಠಿಣ ಕ್ರಮ ಕೈಗೊಂಡು ಹೊಸ ಕ್ರೆಡಿಟ್ ನೀಡುವುದನ್ನು ನಿಷೇಧಿಸಿತ್ತು. ಕ್ರೆಡಿಟ್ ಕಾರ್ಡ್ ಜೊತೆ ಯಾವುದೇ ಹೊಸ ಡಿಜಿಟಲ್ ಉತ್ಪನ್ನವನ್ನು ಬಿಡುಗಡೆ ಮಾಡುವುದನ್ನು ನಿರ್ಬಂಧಿಸಲಾಗಿತ್ತು.
ಎಚ್ಡಿಎಫ್ಸಿ ಬ್ಯಾಂಕ್ ವಕ್ತಾರರು, ಆರ್ಬಿಐ ನಿಷೇಧ ತೆಗೆದು ಹಾಕುವುದನ್ನು ದೃಢಪಡಿಸಿದ್ದಾರೆ. ಎಚ್ಡಿಎಫ್ಸಿ ಬ್ಯಾಂಕ್ ದೇಶದ ಅತಿದೊಡ್ಡ ಕ್ರೆಡಿಟ್ ಕಾರ್ಡ್ ನೀಡುವ ಕಂಪನಿಯಾಗಿದೆ. ಈ ನಿಷೇಧ, ಬ್ಯಾಂಕ್ ಗೆ ಹೊಡೆತ ನೀಡಿದೆ. ಡಿಸೆಂಬರ್ ನಲ್ಲಿ ಒಟ್ಟು ಕಾರ್ಡ್ ಬೇಸ್ 15.38 ಮಿಲಿಯನ್ ಆಗಿದ್ದು, ಜೂನ್ ನಲ್ಲಿ 14.82 ಮಿಲಿಯನ್ ಗೆ ಇಳಿದಿದೆ. ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸುವುದಾಗಿ ಬ್ಯಾಂಕ್ ಹೇಳಿದೆ. ನಿಷೇಧದ ನಂತ್ರ ದೊಡ್ಡ ಮಟ್ಟದ ಪ್ಲಾನ್ ನೊಂದಿಗೆ ವಾಪಸ್ ಆಗಲು ಬ್ಯಾಂಕ್ ಯೋಜನೆ ರೂಪಿಸಿಕೊಂಡಿದೆ.