alex Certify ಇಎಂಐ ಪಾವತಿಸುತ್ತಿರುವ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಎಂಐ ಪಾವತಿಸುತ್ತಿರುವ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಸುದ್ದಿ

ಗೃಹ ಮತ್ತು ವಾಹನ ಸಾಲ ಪಡೆದಿರುವ ಗ್ರಾಹಕರಿಗೆ ಸಂತಸದ ಸುದ್ದಿಯೊಂದಿದೆ. ಎರಡೂ ರೀತಿಯ ಸಾಲಗಳು ಏಪ್ರಿಲ್‌ವರೆಗೆ ದುಬಾರಿಯಾಗುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಆರ್‌ಬಿಐ. ವಾಸ್ತವವಾಗಿ, ಹೆಚ್ಚುತ್ತಿರುವ ಹಣದುಬ್ಬರದ ದೃಷ್ಟಿಯಿಂದ, ಏಪ್ರಿಲ್ 2022 ರವರೆಗೆ ರೆಪೋ ದರವನ್ನು ಹೆಚ್ಚಿಸುವ ಯಾವುದೇ ಯೋಜನೆಯನ್ನು ಆರ್ಬಿಐ ಹೊಂದಿಲ್ಲ. ಹಾಗಾಗಿ ಸಾಲಗಾರರ ಇಎಂಐ ದರ ಹೆಚ್ಚಾಗುವುದಿಲ್ಲವೆಂದು ತಜ್ಞರು ಹೇಳಿದ್ದಾರೆ.

ಫೆಬ್ರವರಿ 8 ರಂದು ಅಂದರೆ ನಾಳೆ ಹಣಕಾಸು ನೀತಿ ಸಮಿತಿಯ ಸಭೆ ನಡೆಯಲಿದೆ. ಇದರಲ್ಲಿ ಆರ್‌ಬಿಐ ಪ್ರಮುಖ ನೀತಿ ದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ ಎನ್ನಲಾಗಿದೆ. ಆದ್ರೆ ರಿವರ್ಸ್ ರೆಪೋ ದರವು ಶೇಕಡಾ 0.25 ರಷ್ಟು ಹೆಚ್ಚಾಗಬಹುದು ಎನ್ನಲಾಗಿದೆ.

ಹಣದುಬ್ಬರವನ್ನು ನಿಯಂತ್ರಿಸಲು ವಿಶ್ವದ ಬಹುತೇಕ ಎಲ್ಲಾ ಪ್ರಮುಖ ಕೇಂದ್ರ ಬ್ಯಾಂಕ್‌ಗಳು ದರಗಳನ್ನು ಹೆಚ್ಚಿಸಲು ತಯಾರಿ ನಡೆಸುತ್ತಿವೆ. ಮೇ 2020 ರಿಂದ ಭಾರತದಲ್ಲಿ ಪ್ರಮುಖ ರೆಪೊದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದು ಶೇಕಡಾ 4ರಲ್ಲಿ ಸ್ಥಿರವಾಗಿದೆ.

ರಿವರ್ಸ್ ರೆಪೊ ದರ ಮತ್ತು ರೆಪೊ ದರದ ನಡುವಿನ ವ್ಯತ್ಯಾಸವನ್ನು ಆರ್‌ಬಿಐ ಮೊದಲು ಕಡಿಮೆ ಮಾಡುತ್ತದೆ ಎಂದು ಬ್ಯಾಂಕ್ ಆಫ್ ಅಮೇರಿಕಾ ಅಂದಾಜಿಸಿದೆ. ಏಪ್ರಿಲ್‌ನಲ್ಲಿ ರಿವರ್ಸ್ ರೆಪೊ ಶೇಕಡಾ 0.40 ರಿಂದ 3.75 ರಷ್ಟು ಹೆಚ್ಚಾಗಬಹುದು ಎನ್ನಲಾಗಿದೆ.  ಜೂನ್‌ನಲ್ಲಿ ಮೊದಲ ಬಾರಿಗೆ ರೆಪೊ ದರವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಡಿಸೆಂಬರ್ ವೇಳೆಗೆ ಅದನ್ನು ಶೇಕಡಾ 4ರಿಂದ ಶೇಕಡಾ 4.75ಕ್ಕೆ ಹೆಚ್ಚಿಸಬಹುದು ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...