ಜೂನ್ 2 ರಂದು ಪ್ರಾರಂಭವಾದ ಭಾರತೀಯ ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಮಿತಿ ಸಭೆ ಇಂದು ಮುಕ್ತಾಯಗೊಂಡಿದೆ. ಸೆಂಟ್ರಲ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್, ಸಮಿತಿ ತೆಗೆದುಕೊಂಡ ನಿರ್ಧಾರಗಳನ್ನು ಪ್ರಕಟಿಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಆರ್ಬಿಐ ನಿರ್ಧರಿಸಿದೆ. ಇದ್ರಿಂದಾಗಿ ಬಡ್ಡಿಯಲ್ಲಿ ಯಾವುದೇ ಬದಲಾವಣೆಯಾಗ್ತಿಲ್ಲ. ರೆಪೊ ದರ ಶೇಕಡಾ 4.25 ರಷ್ಟಿರಲಿದೆ. ಇದೇ ವೇಳೆ ರಿಸರ್ವ್ ರೆಪೊ ದರದಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ. ರಿಸರ್ವ್ ರೆಪೋ ಶೇಕಡಾ 3.35ರಷ್ಟಿರಲಿದೆ.
ಪ್ರಸಕ್ತ 2021-22ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿಯಲ್ಲಿ ಶೇಕಡಾ 9.5 ರಷ್ಟು ಬೆಳವಣಿಗೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷಿಸಿದೆ. ಕೊರೊನಾ ಪರಿಣಾಮದ ಬಗ್ಗೆ ರಿಸರ್ವ್ ಬ್ಯಾಂಕ್ ಗಮನ ನೀಡಲಿದೆ. ನಂತ್ರ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಈ ವರ್ಷ ಚಿಲ್ಲರೆ ಹಣದುಬ್ಬರ ಶೇಕಡಾ 5.1 ರಷ್ಟಿರಬಹುದು ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಹಣಕಾಸು ನೀತಿ ಸಮಿತಿಯ ಹಿಂದಿನ ಸಭೆಯಲ್ಲೂ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ
ಕೊರೊನಾ ಎರಡನೇ ಅಲೆಯಿಂದಾಗಿ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದೇಶದ ಅನೇಕ ಭಾಗಗಳಲ್ಲಿ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಹೇರಿರುವುದ್ರಿಂದ ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಅದಕ್ಕಾಗಿಯೇ ಈ ಸಭೆ ಬಹಳ ಮುಖ್ಯವಾಗಿತ್ತು.