ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಹಣದುಬ್ಬರ ನಿರ್ವಹಣೆಗೆ ಹೆಚ್ಚಿನ ಗಮನಹರಿಸುವ ಉದ್ದೇಶದಿಂದ ಏಪ್ರಿಲ್ ನಲ್ಲಿಯೂ ರೆಪೊ ದರಗಳನ್ನು ಯಥಾಸ್ಥಿತಿ ಮುಂದುವರೆಸುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಏಪ್ರಿಲ್ ನಲ್ಲಿ ಬಡ್ಡಿ ದರಗಳನ್ನು ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಹಣದುಬ್ಬರವನ್ನು ಗುರಿಯ ಶೇಕಡ 4ಕ್ಕೆ ತರುವುದು ಆರ್‌ಬಿಐ ಆದ್ಯತೆಯಾಗಿದೆ. ಬಡ್ಡಿ ದರಗಳನ್ನು ನಿರ್ಧಾರ ಮಾಡುವ ಆರ್ಬಿಐ ಅಂಗವಾಗಿರುವ ಹಣಕಾಸು ನೀತಿ ಪರಾಮರ್ಶೆ ಸಮಿತಿ ಬಡ್ಡಿ ದರಗಳನ್ನು ಕಡಿತ ಮಾಡುವ ವಿಚಾರದಲ್ಲಿ ಅಮೆರಿಕ, ಬ್ರಿಟನ್ ರೀತಿಯ ಕೆಲವು ಪ್ರಮುಖ ಆರ್ಥಿಕತೆಗಳ ಕೇಂದ್ರೀಯ ಬ್ಯಾಂಕುಗಳ ಕಾದು ನೋಡುವ ನೀತಿಯನ್ನು ಅನುಸರಿಸಬಹುದಾಗಿದೆ ಎಂದು ಹೇಳಲಾಗಿದೆ.