![](https://kannadadunia.com/wp-content/uploads/2024/02/cash-cash-500-rs.png)
ಮುಂಬೈ: 5 ವರ್ಷಗಳ ನಂತರ ಆರ್‌ಬಿಐ ತನ್ನ ರೆಪೊ ದರವನ್ನು ಶೇಕಡ 0.25ರಷ್ಟು ಇಳಿಕೆ ಮಾಡಿದೆ. ಇದರ ಬೆನ್ನಲ್ಲೇ 7 ಬ್ಯಾಂಕುಗಳು ತಮ್ಮ ಸಾಲದ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಿವೆ. ವಿವಿಧ ಬ್ಯಾಂಕುಗಳು ತಮ್ಮ ಸಾಲದ ಮೇಲಿನ ಬಡ್ಡಿ ದರವನ್ನು 0.15 ರಿಂದ ಶೇಕಡ 0.25ರಷ್ಟು ಇಳಿಕೆ ಮಾಡಿವೆ.
ಆದರೆ, ದೇಶದ ದೊಡ್ಡ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್.ಡಿ.ಎಫ್.ಸಿ. ಬ್ಯಾಂಕುಗಳು ಮಾತ್ರ ಇನ್ನೂ ಬಡ್ಡಿ ದರ ಇಳಿಕೆ ಮಾಡಿಲ್ಲ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇಕಡ 9ಕ್ಕೆ, ಬ್ಯಾಂಕ್ ಆಫ್ ಬರೋಡಾ ಶೇಕಡ 8.9ಕ್ಕೆ, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್ ಮತ್ತು ಯುಕೋ ಬ್ಯಾಂಕ್ ಶೇಕಡ 0.15 ರಿಂದ ಶೇಕಡ 0.25 ರಷ್ಟು ಬಡ್ಡಿ ದರ ಇಳಿಕೆ ಮಾಡಿವೆ.
ಖಾಸಗಿ ಬ್ಯಾಂಕುಗಳಾದ ಕರೂರು ವೈಶ್ಯ ಬ್ಯಾಂಕ್, ಆರ್.ಬಿ.ಎಲ್. ಬ್ಯಾಂಕುಗಳು ಬಡ್ಡಿ ದರವನ್ನು 11.35ಕ್ಕೆ ಇಳಿಕೆ ಮಾಡಿವೆ.