ಮುಂಬೈ: ಬ್ಯಾಂಕ್ ಗಳಲ್ಲಿ ಚೆಕ್ ಕ್ಲಿಯರೆನ್ಸ್ ಅವಧಿಯನ್ನು ಎರಡು ಮೂರು ದಿನಗಳಿಂದ ಕೇವಲ ಮೂರು ಗಂಟೆಗಳಿಗೆ ಇಳಿಸುವ ಮಹತ್ವದ ನಿರ್ಧಾರವನ್ನು ಆರ್.ಬಿ.ಐ. ಕೈಗೊಂಡಿದೆ. ಶೀಘ್ರವೇ ಈ ನೀತಿ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.
ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ದ್ವೈಮಾಸಿಕ ಸಾಲ ನೀತಿ ಪ್ರಕಟಿಸಿದ ಆರ್.ಬಿ.ಐ. ಗವರ್ನರ್ ಶಕ್ತಿ ಕಾಂತ್ ದಾಸ್ ಅವರು, ಚೆಕ್ ಕ್ಲಿಯರೆನ್ಸ್ ಸಮಯವನ್ನು ಪ್ರಸ್ತುತ ಎರಡು ಮೂರು ದಿನಗಳಿಂದ ಕೆಲವೇ ಗಂಟೆಗಳಿಗೆ ಕಡಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಚೆಕ್ ಕ್ಲಿಯರೆನ್ಸ್ ಗಾಗಿ ಮೂರ್ನಾಲ್ಕು ದಿನ ಕಾಯಬೇಕಿಲ್ಲ. ಮೂರು ಗಂಟೆಯಲ್ಲೇ ಚೆಕ್ ಕ್ಲಿಯರೆನ್ಸ್ ವ್ಯವಸ್ಥೆ ಜಾರಿಗೆ ಬರಲಿದೆ. ಈ ಬದಲಾವಣೆಯು ಚೆಕ್ ಕ್ಲಿಯರೆನ್ಸ್‌ಗೆ ತೆಗೆದುಕೊಳ್ಳುವ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲು ಮತ್ತು ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್‌ಗಳ ವರ್ಗಾವಣೆ(NEFT) ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್(RTGS) ನೀಡುವ ಕ್ಷಿಪ್ರ ವರ್ಗಾವಣೆ ವೇಗಕ್ಕೆ ಹತ್ತಿರ ತರಲು ಹೊಂದಿಸಲಾಗಿದೆ ಎನ್ನಲಾಗಿದೆ.