ಚಿತ್ರದುರ್ಗ: ಕಲುಷಿತ ನೀರು ಸೇವಿಸಿ ಐವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಕವಾಡಿಗರಹಟ್ಟಿ ಬಡಾವಣೆಗೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ತಲಾ 50,000 ರೂ. ಧನ ಸಹಾಯ ಮಾಡಿದ್ದಾರೆ.
ಭೇಟಿ ವೇಳೆ ತಡವಾಗಿ ಬಂದ ಜಿಲ್ಲಾಧಿಕಾರಿ ದಿವ್ಯಪ್ರಭು ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರದಿಂದ ಪರಿಹಾರದ ಚೆಕ್ ಗಳನ್ನು ಏಕೆ ವಿತರಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡು ಸ್ಥಳದಲ್ಲೇ ಮುಖ್ಯಮಂತ್ರಿಗಳಿಗೆ ಫೋನ್ ಮಾಡಿದ್ದಾರೆ.
ಡಿಸಿ ದಿವ್ಯ ಪ್ರಭು ಅವರ ವಿರುದ್ಧ ಮುಖ್ಯಮಂತ್ರಿಗಳಿಗೆ ಸಚಿವ ತಿಮ್ಮಾಪುರ್ ದೂರು ಹೇಳಿದ್ದಾರೆ. ಸರ್ಕಾರಕ್ಕೆ ವರದಿ ಕಳಿಸಿದ್ದೇನೆ ಎಂದು ಹೇಳುತ್ತಾ ಕುಳಿತಿದ್ದಾರೆ ಎಂದು ದೂರು ನೀಡಿದ್ದಾರೆ. ವರದಿ ಬರುವವರೆಗೂ ಕಾದು ಕೂರುವುದು ಬೇಡ, ಪರಿಹಾರ ಕೊಡಿ. ಜನರಿಗೆ ಉತ್ತರ ಕೊಡುವವರು ನಾವು ನೀವಲ್ಲ ಎಂದು ಹೇಳಿದ್ದಾರೆ.