alex Certify ಸರ್ವರೋಗಗಳಿಗೂ ಮದ್ದು ಹಸಿ ಅರಿಶಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ವರೋಗಗಳಿಗೂ ಮದ್ದು ಹಸಿ ಅರಿಶಿನ

ಅರಿಶಿನ ಬಹು ಉಪಯೋಗಿ, ಒಂದು ರೀತಿಯಲ್ಲಿ ಸರ್ವರೋಗಗಳಿಗೂ ಮದ್ದು. ಅದರಲ್ಲೂ ಹಸಿ ಅರಿಶಿನಕ್ಕೆ ಆಯುರ್ವೇದದಲ್ಲಿ ಸಾಕಷ್ಟು ಮಹತ್ವವಿದೆ. ಅನೇಕ ದೈಹಿಕ ಸಮಸ್ಯೆಗಳನ್ನು ಇದು ದೂರ ಮಾಡಬಲ್ಲದು. ಹಸಿ ಅರಿಶಿನವನ್ನು ಚಳಿಗಾಲದಲ್ಲಿ ಬಳಸಿದ್ರೆ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬಹುದು.

ಹಸಿ ಅರಿಶಿನದಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಸೇರಿದಂತೆ ಅನೇಕ ಜೀವಸತ್ವಗಳು ಇವೆ. ಹಸಿ ಅರಿಶಿನವು ರುಚಿಯಲ್ಲಿ ಸ್ವಲ್ಪ ಕಹಿಯಾಗಿರುತ್ತದೆ. ನೇರವಾಗಿ ತಿನ್ನುವುದು ಕಷ್ಟವಾಗಬಹುದು. ಆದರೆ ಮೇಲೋಗರಗಳಿಗೆ ಕೂಡ ನೀವಿದನ್ನು ಬಳಕೆ ಮಾಡಬಹುದು.

ಸಕ್ಕರೆ ಕಾಯಿಲೆ ಇರುವವರಿಗೆ ಹಸಿ ಅರಿಶಿನ ವರದಾನವಾಗಿದೆ. ಅರಿಶಿನವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿರುತ್ತದೆ. ಅರಿಶಿನದಲ್ಲಿ ಕಂಡುಬರುವ ಲಿಪೊಪೊಲಿಸ್ಯಾಕರೈಡ್ ಎಂಬ ಅಂಶವು ರಕ್ತದಲ್ಲಿನ ಗ್ಲೂಕೋಸ್ ಅನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಸಿ ಅರಿಶಿನವನ್ನು ಬಳಕೆ ಮಾಡಿ. ಕ್ಯಾನ್ಸರ್‌ ಅನ್ನು ಸಹ ಇದು ದೂರವಿಡುತ್ತದೆ.

ಹಸಿ ಅರಿಶಿನವು ಚರ್ಮವನ್ನು ಕಾಂತಿಯುತವಾಗಿಸುತ್ತದೆ. ಹಸಿ ಅರಿಶಿನವನ್ನು ತೇಯ್ದು ಹಚ್ಚುವುದರಿಂದ ಮುಖದ ಹೊಳಪು ಮರಳಿ ಬರುತ್ತದೆ. ಪ್ರತಿದಿನ ಹಸಿ ಅರಿಶಿನವನ್ನು ಹಚ್ಚುವುದರಿಂದ ಕೆಲವೇ ದಿನಗಳಲ್ಲಿ ತ್ವಚೆಯ ಮೇಲಿನ ಕಲೆಗಳು ನಿವಾರಣೆಯಾಗಿ ಚರ್ಮವು ಹೊಳೆಯಲು ಪ್ರಾರಂಭಿಸುತ್ತದೆ. ನಿಮ್ಮ ಚರ್ಮ ಸುಧಾರಿಸಿ ಕಾಂತಿಯುಕ್ತವಾಗಬೇಕೆಂದು ನೀವು ಬಯಸಿದರೆ  ಮನೆಯಲ್ಲಿ ಹಸಿ ಅರಿಶಿನವನ್ನು ಮಾತ್ರ ಬಳಸಿ.

ಹಸಿ ಅರಿಶಿನದ ಕೊಂಬಿಗೆ ಸ್ವಲ್ಪ ಹಾಲು ಬೆರೆಸಿ ರುಬ್ಬಿ ಪೇಸ್ಟ್‌ ತಯಾರಿಸಿ. ಅದನ್ನು ಪ್ರತಿದಿನ ಮುಖಕ್ಕೆ ಹಚ್ಚಿ. ಸುಮಾರು ಅರ್ಧ ಗಂಟೆಯ ನಂತರ ತೊಳೆಯಿರಿ. ಇದರಿಂದ ನೀವು ಖಂಡಿತವಾಗಿಯೂ ಪ್ರಯೋಜನ ಪಡೆಯುತ್ತೀರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...