ಪನೀರ್ ಅತ್ಯಂತ ಪೋಷಕಾಂಶ ಭರಿತ ಆಹಾರಗಳಲ್ಲೊಂದು. 100 ಗ್ರಾಂ ಪನೀರ್‌ನಲ್ಲಿ 21.43 ಗ್ರಾಂ ಪ್ರೋಟೀನ್ ಇರುತ್ತದೆ. ವಿಟಮಿನ್ ಎ ಮತ್ತು ಕ್ಯಾಲ್ಸಿಯಂ ಸಹ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. ಹಾಗಾಗಿ ಆರೋಗ್ಯ ತಜ್ಞರ ಪ್ರಕಾರ ಪನೀರ್ ಅನ್ನು ಹಸಿಯಾಗಿ ಸೇವಿಸುವ ಮೂಲಕ ಅನೇಕ ರೋಗಗಳನ್ನು ಗುಣಪಡಿಸಬಹುದು.
ಅಧ್ಯಯನದ ಪ್ರಕಾರ ತೀವ್ರವಾದ ಪ್ರೋಟೀನ್ ಕೊರತೆಯು ಕ್ವಾಶಿಯೋರ್ಕರ್ ಕಾಯಿಲೆಗೆ ಕಾರಣವಾಗುತ್ತದೆ. ಇದರಿಂದ ದೇಹ ಒಣಗುತ್ತದೆ. ಅತಿಯಾದ ದೌರ್ಬಲ್ಯ ಮತ್ತು ಆಯಾಸ ಕಾಡುತ್ತದೆ. ಪನೀರ್ ಸೇವನೆ ಮಾಡುವುದರಿಂದ ಈ ಕಾಯಿಲೆಯಿಂದ ದೂರವಿರಬಹುದು.
ಕಾಲುಗಳು, ಹೊಟ್ಟೆ ಅಥವಾ ಮುಖದ ಮೇಲಿನ ಊತವು ಎಡಿಮಾದ ಸಂಕೇತವಾಗಿರಬಹುದು. ರಕ್ತದಲ್ಲಿ ಪ್ರೋಟೀನ್ ಕೂಡ ಇರುತ್ತದೆ, ಅದು ಕಡಿಮೆಯಾದರೆ ಊತದ ಸಮಸ್ಯೆಗೆ ಬರಬಹುದು. ಪನೀರ್ ಅನ್ನು ಹಸಿಯಾಗಿಯೇ ಸೇವಿಸುವ ಮೂಲಕ ಇಂತಹ ಪ್ರೋಟೀನ್ ಕೊರತೆಯನ್ನು ನಿವಾರಿಸಬಹುದು.
ಯಕೃತ್ತಿನಲ್ಲಿ ಕೊಬ್ಬು ಶೇಖರಣೆ ತುಂಬಾ ಅಪಾಯಕಾರಿ. ಯಕೃತ್ತಿನ ಜೀವಕೋಶಗಳಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಇದು ಪ್ರೋಟೀನ್ ಕೊರತೆಯಿಂದಲೂ ಆಗಬಹುದು. ತಕ್ಷಣವೇ ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಯಕೃತ್ತಿನ ವೈಫಲ್ಯಕ್ಕೂ ಇದು ಕಾರಣವಾಗಬಹುದು. ಪ್ರೋಟೀನ್ ಕೊರತೆಯನ್ನು ನಿವಾರಿಸಲು ಪನೀರ್ ಅನ್ನು ಸೇವಿಸಬಹುದು.
ಪ್ರೋಟೀನ್ ಕೊರತೆಯು ಮೂಳೆಗಳಿಗೆ ಹಾನಿಯನ್ನುಂಟುಮಾಡುತ್ತದೆ. ಇದರಿಂದಾಗಿ ಆಸ್ಟಿಯೊಪೊರೋಸಿಸ್ ಬರಬಹುದು. ಈ ಕಾಯಿಲೆ ಮೂಳೆ ಮುರಿತಗಳಿಗೆ ಕಾರಣವಾಗಬಹುದು. ಪನೀರ್‌ನಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ. ಹಾಗಾಗಿ ಪನೀರ್ ಸೇವನೆ ಮೂಳೆಗಳಿಗೆ ತುಂಬಾ ಒಳ್ಳೆಯದು.
ಹಸಿ ಪನೀರ್ ಸೇವನೆ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ವಾಸ್ತವವಾಗಿ ಪ್ರೋಟೀನ್ ಕೊರತೆಯು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ, ಇದರಿಂದಾಗಿ ಅನೇಕ ರೋಗಗಳು ಮತ್ತು ಸೋಂಕುಗಳು ಸಂಭವಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ಪನೀರ್ ಸೇವನೆ ಮಾಡುವುದರಿಂದ ದೇಹವನ್ನು ಸೋಂಕಿನಿಂದಲೂ ರಕ್ಷಿಸಿಕೊಳ್ಳಬಹುದು.