
ಈ ಚಿತ್ರದಲ್ಲಿ ರವಿತೇಜ ಸೇರಿದಂತೆ ಅವರಿಗೆ ಜೋಡಿಯಾಗಿ ಅನುಷ್ಕಾ ಶೆಟ್ಟಿ ಅಭಿನಯಿಸಿದ್ದು, ಅಜಯ್ ವಿನೀತ್ ಕುಮಾರ್, ರಾಜೀವ್ ಕಣಕಾಲ, ರುತಿಕಾ, ಬ್ರಹ್ಮಾನಂದಂ, ಅಮಿತ್ ತಿವಾರಿ, ರಘು ಬಾಬು, ಜಯಪ್ರಕಾಶ್ ರೆಡ್ಡಿ, ಪ್ರಭಾಸ್ ಶ್ರೀನು, ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಶ್ರೀ ಕೀರ್ತಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಎಂ ಎಲ್ ಕುಮಾರ್ ಚೌದರಿ ನಿರ್ಮಾಣ ಮಾಡಿದ್ದು, ಕೋಟಗಿರಿ ವೆಂಕಟೇಶ್ವರರಾವ್ ಅವರ ಸಂಕಲನವಿದೆ. ಇನ್ನುಳಿದಂತೆ ಎಂಎಂ ಕೀರವಾಣಿ ಸಂಗೀತ ಸಂಯೋಜನೆ ನೀಡಿದ್ದಾರೆ.