ಮರಿಯಾನೆಯ ಸಂಭ್ರಮವನ್ನು ಅನುಕರಿಸಿದ್ರಾ ಕ್ರಿಕೆಟಿಗ ರವೀಂದ್ರ ಜಡೇಜಾ..? 22-12-2021 7:41AM IST / No Comments / Posted In: Latest News, Live News, Sports ಜಗತ್ತಿನ ಅತ್ಯಂತ ಗೌರವಾನ್ವಿತ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದಾಗಿದೆ. ಬ್ಯಾಟರ್‌ಗಳು ತಮ್ಮ ಫಾರ್ಮ್ಯಾಟ್‌ಗೆ ಅನುಗುಣವಾಗಿ ಪ್ರತಿ ರನ್ ಹೊಡೆಯಲು ಬಹಳ ಶ್ರಮ ಪಡಬೇಕಾಗುತ್ತದೆ. ಪ್ರತಿಯೊಬ್ಬ ಬ್ಯಾಟ್ಸ್ ಮ್ಯಾನ್ ತಮ್ಮ ಗೆಲುವಿನ ಮೈಲಿಗಲ್ಲುಗಳನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಅದರಲ್ಲೂ ಟೀಂ ಇಂಡಿಯಾದ ಪ್ರಸಿದ್ಧ ಆಲ್ ರೌಂಡರ್ ರವೀಂದ್ರ ಜಡೇಜಾ ತಮ್ಮ ಸಂಭ್ರಮವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಹೌದು, ಜಡೇಜಾ ತಮ್ಮ ಶತಕ ಅಥವಾ ಅರ್ಧಶತಕವನ್ನು ಬ್ಯಾಟ್‌ನಿಂದಲೇ ಬೀಸುವ ಮೂಲಕ ಸಂಭ್ರಮಿಸುತ್ತಾರೆ. ಕ್ರಿಕೆಟ್ ಪ್ರೇಮಿಗಳು ಜಡೇಜಾ ಅವರ ಈ ಶೈಲಿಯನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಅನೇಕ ಅಭಿಮಾನಿಗಳು ಅವರನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಇತ್ತೀಚೆಗಷ್ಟೇ ಟ್ವಿಟರ್‌ನಲ್ಲಿ, ಆನೆಯ ಮರಿಯ ವಿಡಿಯೋವೊಂದು ವೈರಲ್ ಆಗಿದೆ. ತಾಯಾನೆ ಪಕ್ಕದಲ್ಲಿದ್ದ ಮರಿಯಾನೆಯು ತನ್ನ ಸೊಂಡಿಲನ್ನು ತಿರುಗಿಸುತ್ತಾ ಸಂತೋಷವನ್ನು ಆಚರಿಸಿದೆ. ಈ ಮುದ್ದಾದ ವಿಡಿಯೋವನ್ನು ನೆಟ್ಟಿಗರು ಜಡೇಜಾರ ಬ್ಯಾಟ್ ಬೀಸುವ ಸಂಭ್ರಮಾಚರಣೆಗೆ ಹೋಲಿಸಿದ್ದಾರೆ. ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ಜಡೇಜಾ ಉತ್ತಮ ಫಾರ್ಮ್ ನಲ್ಲಿದ್ದಾರೆ. ವೇಗವಾಗಿ ಸ್ಕೋರ್ ಮಾಡುವುದರಿಂದ ಹಿಡಿದು, ಕಠಿಣ ಓವರ್‌ಗಳನ್ನು ಬೌಲ್ ಮಾಡುವುದು ಹಾಗೂ ಅಸಾಧಾರಣ ಫೀಲ್ಡಿಂಗ್ ಮಾಡುವ ಅವರ ಚಾಕಚಕ್ಯತೆ ಕ್ರೀಡಾ ಪ್ರೇಮಿಗಳನ್ನು ಬೆರಗುಗೊಳಿಸಿದೆ. Sir Jadeja after scoring 50 🙈 pic.twitter.com/Z63fcT69H0 — Chinmay Tiwari (@Chinmay_TI) December 20, 2021