ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಸ್ತರಣೆ/ಪುನಾರಚನೆಯಾಗಿದ್ದು, ಅಚ್ಚರಿಯ ಬೆಳವಣಿಗೆಯಲ್ಲಿ ಮೋದಿ ಆಪ್ತ ಬಳಗದಲ್ಲಿದ್ದ ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್ ಅವರಿಂದ ರಾಜೀನಾಮೆ ಪಡೆಯಲಾಗಿದೆ.
ಹರ್ಷವರ್ಧನ್ ಮತ್ತು ಡಿ.ವಿ. ಸದಾನಂದಗೌಡ ಸೇರಿದಂತೆ 12 ಸಚಿವರು ರಾಜೀನಾಮೆ ನೀಡಿದ್ದು, 43 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಗೃಹ ಸಚಿವ ಅಮಿತ್ ಶಾಗೆ ಗೃಹಖಾತೆಯ ಜೊತೆಗೆ ನೂತನವಾಗಿ ರಚಿಸಲಾದ ಸಹಕಾರ ಖಾತೆ ನೀಡಲಾಗಿದೆ.
ಕಿರಣ್ ರಿಜಿಜು ಅವರಿಗೆ ರವಿಶಂಕರ ಪ್ರಸಾದ್ ಅವರು ನಿರ್ವಹಿಸುತ್ತಿದ್ದ ಕಾನೂನು ಖಾತೆ, ಮನಸುಖ್ ಮಾಂಡವಿಯಾ ಅವರಿಗೆ ಆರೋಗ್ಯ, ಜೊತೆಗೆ ರಸಗೊಬ್ಬರ ಖಾತೆ ನೀಡಲಾಗಿದೆ. ಧರ್ಮೇಂದ್ರ ಪ್ರಧಾನ್ ಗೆ ಶಿಕ್ಷಣ ಖಾತೆ, ಅನುರಾಗ್ ಠಾಕೂರ್ ಗೆ ಮಾಹಿತಿ, ಪ್ರಸಾರ ಖಾತೆ ನೀಡಲಾಗಿದೆ. ಪಶುಪತಿ ಪಾರಸ್ ಗೆ ಆಹಾರ ಖಾತೆ ಹೊಣೆ ವಹಿಸಲಾಗಿದೆ.
ಭೂಪೇಂದ್ರ ಯಾದವ್ ಗೆ ಪರಿಸರ, ಅರಣ್ಯ, ಹವಾಮಾನ ಬದಲಾವಣೆ, ಕಾರ್ಮಿಕ ಖಾತೆ ನೀಡಲಾಗಿದೆ.