alex Certify ರವಿ ಚೆನ್ನಣ್ಣನವರ್ ಸೋದರನ ವಿರುದ್ಧ ಎಫ್ಐಆರ್: ಪತ್ನಿಗೆ ಕಿರುಕುಳ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರವಿ ಚೆನ್ನಣ್ಣನವರ್ ಸೋದರನ ವಿರುದ್ಧ ಎಫ್ಐಆರ್: ಪತ್ನಿಗೆ ಕಿರುಕುಳ ಆರೋಪ

ಬೆಂಗಳೂರು: ಪೊಲೀಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಸೋದರನಿಂದ ಪತ್ನಿಗೆ ಕಿರುಕುಳ ನೀಡಿದ ಆರೋಪದ ಕೇಳಿಬಂದಿದ್ದು, ಎಫ್ಐಆರ್ ದಾಖಲಾಗಿದೆ.

ಬೆಂಗಳೂರಿನ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ರವಿ ಚೆನ್ನಣ್ಣನವರ್ ಸಹೋದರ ರಾಘವೇಂದ್ರ ಡಿ. ಚೆನ್ನಣ್ಣನವರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 2015ರಲ್ಲಿ ರೋಜಾ ಮತ್ತು ರಾಘವೇಂದ್ರ ಚನ್ನಣ್ಣನವರ್ ಮದುವೆಯಾಗಿದ್ದು, ರವಿ ಚೆನ್ನಣ್ಣನವರ್ ಮುಂದೆ ನಿಂತು ಮದುವೆಮಾಡಿಸಿದ್ದರು.

ರೋಜಾ ಮದುವೆಗೂ ಮುನ್ನ ಮತ್ತೊಬ್ಬ ಮಹಿಳೆಯೊಂದಿಗೆ ರಾಘವೇಂದ್ರ ಮದುವೆಯಾಗಿದ್ದು, ಈ ವಿಷಯವನ್ನು ಮುಚ್ಚಿಟ್ಟಿದ್ದರು. ಮದುವೆಯಾದ ಒಂದೇ ವರ್ಷದಲ್ಲಿ ರೋಜಾ ಅವರನ್ನು ಬಿಟ್ಟಿದ್ದು, ಮೊದಲು ಮದುವೆಯಾಗಿದ್ದ ಮಹಿಳೆಯೊಂದಿಗೆ ಸಂಸಾರ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಆರಂಭದಲ್ಲಿ ಹೀಗೆ ಮಾಡುತ್ತಾನೆ, ಮುಂದೆ ಎಲ್ಲ ಸರಿಹೋಗುತ್ತದೆ. ನೀನು ಉನ್ನತ ಶಿಕ್ಷಣದ ಕಡೆ ಗಮನ ಹರಿಸು ಎಂದು ರವಿ ಚೆನ್ನಣ್ಣನವರು ಹೇಳಿದ್ದರೆಂದು ರೋಜಾ ದೂರು ನೀಡಿದ್ದಾರೆ. ಇಬ್ಬರ ಜೊತೆಗೆ ಸಂಸಾರ ಮಾಡುವುದಾಗಿಒ ರಾಘವೇಂದ್ರ ಹೇಳಿದ್ದಾರೆ. ತನಗೆ ನ್ಯಾಯ ಬೇಕೆಂದು ಪೊಲೀಸ್ ಠಾಣೆಗೆ ರೋಜಾ ದೂರು ನೀಡಿದ್ದು, ವರದಕ್ಷಿಣೆ ಕಿರುಕುಳ ಆರೋಪದಡಿ ಎಫ್ಐಆರ್ ದಾಖಲಿಸಲಾಗಿದೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...