
ಭುವನೇಶ್ವರ: ಒಡಿಶಾದ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ ಓಪನ್ ಮಾಡಲಾಗಿದೆ. 46 ವರ್ಷಗಳ ನಂತರ ಅಧಿಕಾರಿಗಳು ರತ್ನ ಭಂಡಾರದ ರಹಸ್ಯ ಮನೆಯ ಬಾಗಿಲು ತೆರೆದಿದ್ದಾರೆ.
ಜಸ್ಟೀಸ್ ಬಿಶ್ವನಾಥನ್ ರಾತ್ ಸಮಿತಿ ಶಿಫಾರಸಿನಂತೆ 1978ರ ನಂತರ ರತ್ನ ಭಂಡಾರ ಬಾಗಿಲು ತೆರೆಯಲಾಗಿದೆ.
ಒಡಿಶಾ ಸರ್ಕಾರವು ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳ ದಾಸ್ತಾನುಗಳಿರುವ 12 ನೇ ಶತಮಾನದ ಪುರಿಯ ಜಗನ್ನಾಥ ದೇವಾಲಯದ ಪೂಜ್ಯ ಖಜಾನೆಯಾದ ರತ್ನ ಭಂಡಾರ್ ಅನ್ನು ಭಾನುವಾರ ತೆರೆದಿದೆ
ಖಜಾನೆಯಲ್ಲಿನ ಬೆಲೆಬಾಳುವ ವಸ್ತುಗಳ ದಾಸ್ತಾನು ಮೇಲ್ವಿಚಾರಣೆಗೆ ರಾಜ್ಯ ಸರ್ಕಾರ ರಚಿಸಿರುವ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಬಿಸ್ವನಾಥ್ ರಾತ್, ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ(ಎಸ್‌ಜೆಟಿಎ) ಮುಖ್ಯ ಆಡಳಿತಾಧಿಕಾರಿ ಅರಬಿಂದ ಪಾಧೀ ಸೇರಿದಂತೆ ಸಮಿತಿಯ ಸದಸ್ಯರು ಸೇರಿ ಹಲವರು ಉಪಸ್ಥಿತರಿದ್ದರು.
ಬೆಲೆಬಾಳುವ ವಸ್ತುಗಳನ್ನು ತಾತ್ಕಾಲಿಕವಾಗಿ ಇಡುವ ಸ್ಥಳವನ್ನೂ ಗುರುತಿಸಲಾಗಿದೆ ಎಂದು ಮಾಜಿ ಒಡಿಶಾ ಹೈಕೋರ್ಟ್ ನ್ಯಾಯಾಧೀಶರು ತಿಳಿಸಿದ್ದಾರೆ.