ಬೆಂಗಳೂರು: ಆಹಾರ ಇಲಾಖೆಯಲ್ಲಿ ಡಿಜಿಟಲ್ ವ್ಯವಸ್ಥೆಗೆ ಒತ್ತು ನೀಡಲಾಗಿ,ದ್ದು ಲ್ಯಾಪ್ಟಾಪ್, ಬೆರಳಚ್ಚು ಬಳಸಲು ವೃದ್ಧರಿಗೆ ಕಷ್ಟವೆಂದರಿತು 65 ವರ್ಷ ಮೇಲ್ಪಟ್ಟವರ ರೇಷನ್ ಅಂಗಡಿ ಪರವಾನಿಗೆ ರದ್ದುಗೊಳಿಸುವ ಚಿಂತನೆ ನಡೆದಿದೆ.
ಆಹಾರ ಇಲಾಖೆ ಪಡಿತರ ವಿತರಣೆ ಕಾರ್ಯವನ್ನು ಡಿಜಿಟಲೀಕರಣಗೊಳಿಸುತ್ತಿದ್ದು ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ಚೀಟಿದಾರರ ಬೆರಳಚ್ಚು ಪಡೆಯಲು ಲ್ಯಾಪ್ಟಾಪ್ ಬಳಕೆ ಕಡ್ಡಾಯ ಮಾಡಿದೆ. ರಾಜ್ಯ ಸರ್ಕಾರ ಹೊಸ ನಿಯಮ ಜಾರಿಗೆ ತಂದರೆ ಶೇಕಡ 40ರಷ್ಟು 65 ವರ್ಷ ಮೇಲ್ಪಟ್ಟ ರೇಷನ್ ಅಂಗಡಿ ಮಾಲೀಕರಿಗೆ ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗಿದೆ.