ಬೆಂಗಳೂರು: ಅಕ್ರಮ ಎಸಗಿದ ನ್ಯಾಯಬೆಲೆ ಅಂಗಡಿಯ ಲೈಸೆನ್ಸ್ ರದ್ದು ಮಾಡಲಾಗಿದ್ದು, ಸರ್ಕಾರದ ಕ್ರಮವನ್ನು ಹೈಕೋರ್ಟ್ ವಿಭಾಗಿಯ ಪೀಠ ಎತ್ತಿ ಹಿಡಿದಿದೆ.
ಪಡಿತರ ಧಾನ್ಯ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಪಡಿತರ ಕಾರ್ಡ್ ದಾರರಿಗೆ ಧಾನ್ಯ ನೀಡದಿರುವುದು ಲೈಸೆನ್ಸ್ ರದ್ದು ಮಾಡಲು ಅರ್ಹ ಪ್ರಕರಣಗಳು ಎಂದು ನ್ಯಾಯಪೀಠ ಹೇಳಿದೆ.
ಬಡವರಿಗೆಂದೇ ಪಡಿತರ ಧಾನ್ಯ ಪೂರೈಕೆ ಮಾಡಲಾಗುತ್ತಿದೆ. ಆಹಾರಧಾನ್ಯ ಪೂರೈಕೆ ಮಾಡದಿರುವುದು ಗಂಭೀರವಾದ ವಿಚಾರವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ, ನ್ಯಾಯಮೂರ್ತಿ ಅಶೋಕ್ ಎಸ್. ಕಿಣಿ ಅವರಿದ್ದ ವಿಭಾಗೀಯ ಪೀಠ ಹೇಳಿದೆ. ರಾಮನಗರದ ಸಂಜೀವಯ್ಯ ಎಂಬುವರ ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದು ಮಾಡಲಾಗಿದೆ. ರಾಮನಗರ ಜಿಲ್ಲಾಡಳಿತದ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.