ಯಾದಗಿರಿ: ಶಹಾಪುರದಲ್ಲಿ ನಡೆದಿದ್ದ ಪಡಿತರ ಅಕ್ಕಿ ಕಳ್ಳತನ ಪ್ರಕ್ರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ದೂರು ನೀಡಿದ್ದ ಅಧಿಕಾರಿಯೇ ಆರೋಪಿ ಎಂಬುದು ತನಿಖೆಯಿಂದ ಬಯಲಾಗಿದೆ.
ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನ.22ರಂದು ಪಡಿತರ ಅಕ್ಕಿ ಕಳ್ಳತನ ನಡೆದಿತ್ತು. ಶಹಾಪುರದ ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ 2 ಕೋಟಿ 66 ಲಕ್ಷ ಮೌಲ್ಯದ 6,077 ಕಿಂಟ್ವಾಲ್ ಅಂಕಿ ಕಳ್ಳತನವಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಭೀಮರಾಯ ಮಸಾಲಿ ದೂರು ನೀಡಿದ್ದರು.
ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಅಕ್ಕಿ ಕಳ್ಳತನ ಪ್ರಕರಣದಲ್ಲಿ ದೂರು ನೀಡಿರುವ ಅಧಿಕಾರಿ ಭೀಮರಾಮ ಕೂಡ ಆರೋಪಿ ಎಂಬುದು ತಿಳಿದುಬಂದಿದೆ. ಪಡಿತರ ಅಕ್ಕಿ ಕಳುವು ಮಾಡುತ್ತಿದ್ದ ಕೆಲ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಅಕ್ರಮದಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಭೀಮರಾಯ ಮಸಾಲಿಯೂ ಭಾಗಿಯಾಗಿರುವುದಾಗಿ ಬಾಯ್ಬಿಟ್ಟಿದ್ದಾರೆ.
ಕಳ್ಳತನ ಮಾಡುತ್ತಿದ್ದ ಅಕ್ಕಿಯಿಂದ ಬಂದ ಹಣವನ್ನು ಭೀಮರಾಯ ಮಸಾಲಿ, ಈ ಹಿಂದಿನ ಡಿಡಿ ಪ್ರಭು ದೊರೆ, ಶಿರಸ್ತೇದಾರ, ಫುಡ್ ಇನ್ಸ್ ಪೆಕ್ಟರ್ ಗಳಿಗೂ ಪಾಲು ನೀಡುತ್ತಿರುವ ಬಗ್ಗೆ ತಿಳಿಸಿದ್ದಾರೆ. ಅಲ್ಲದೇ ಎ1 ಆರೋಪಿ ಶಿವಯ್ಯ ಎಂಬಾತನಿಂದಲೇ ಹಣ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಒಟ್ಟಾರೆ ಪಡಿತರ ಅಕ್ಕಿ ಕಳ್ಳತನ ಪ್ರಕರಣದಲ್ಲಿ ಅಧಿಕಾರಿಗಳೇ ಶಾಮಿಲಾಗಿರುವುದು ಬಯಲಾಗಿದೆ.