ಬೆಂಗಳೂರು: ನ್ಯಾಯಬೆಲೆ ಅಂಗಡಿಗಳಲ್ಲಿ ಇನ್ನು ಮುಂದೆ ರೇಷನ್ ಜೊತೆಗೆ ದಿನಸಿ ಸಾಮಗ್ರಿಯನ್ನು ಪಡೆಯಬಹುದು.
ಎಂ.ಆರ್.ಪಿ. ದರದಲ್ಲಿ ದಿನಸಿ ಸಾಮಗ್ರಿ ಮಾರಾಟಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಏಪ್ರಿಲ್ 1 ರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಬೇಳೆ, ಎಣ್ಣೆ, ಉಪ್ಪು, ಸಕ್ಕರೆ ಮೊದಲಾದವುಗಳನ್ನು ಮಾರಾಟ ಮಾಡಲು ಒಪ್ಪಿಗೆ ನೀಡಲಾಗಿದೆ.
ನ್ಯಾಯ ಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯಗಳ ಜೊತೆಗೆ ದಿನಸಿ ಮತ್ತು ಗೃಹಬಳಕೆ ವಸ್ತುಗಳನ್ನು ಮಾರಾಟ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ದಿನಸಿ ವಸ್ತುಗಳನ್ನು ಖರೀದಿಸಿದರೆ ಮಾತ್ರ ರೇಷನ್ ಕೊಡುವುದಾಗಿ ಪಡಿತರ ಚೀಟಿದಾರರಿಗೆ ಒತ್ತಡ ಹಾಕುವಂತಿಲ್ಲ. ಯಾವುದೇ ವಸ್ತು ಖರೀದಿಗೆ ಬಲವಂತ ಮಾಡುವಂತಿಲ್ಲ ಎಂದು ಹೇಳಲಾಗಿದೆ.