ಪಡಿತರ ಚೀಟಿದಾರರಿಗೆ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಲು ಚಿಂತನೆ ನಡೆಸಿದೆ. ಅಕ್ಕಿ, ಗೋಧಿ, ರಾಗಿ, ಬೇಳೆ, ಉಪ್ಪು, ಸಕ್ಕರೆ ರೀತಿಯಲ್ಲಿ ಬೆಲ್ಲವನ್ನು ಕೂಡ ಪಡಿತರ ಜೊತೆಗೆ ನೀಡುವ ಚರ್ಚೆ ನಡೆದಿದೆ.
ಆಲೆಮನೆಗಳ ಪುನಶ್ಚೇತನಕ್ಕೆ ಶಾಶ್ವತ ಪರಿಹಾರ ರೂಪಿಸಿ ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಮಂಡ್ಯ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಉತ್ತಮ ಮಾರುಕಟ್ಟೆ ನಿರ್ಮಾಣ ಉದ್ದೇಶದಿಂದ ಪಡಿತರ ಪದಾರ್ಥಗಳ ಪಟ್ಟಿಯಲ್ಲಿ ಬೆಲ್ಲವನ್ನು ಸೇರ್ಪಡೆ ಮಾಡುವಂತೆ ಸಚಿವ ನಾರಾಯಣಗೌಡ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ. ಆಲೆಮನೆ, ಪಡಿತರ ಚೀಟಿದಾರರಿಗೆ ಅನುಕೂಲವಾಗುವಂತೆ ಪಡಿತರ ಪಟ್ಟಿಗೆ ಬೆಲ್ಲವನ್ನು ಸೇರ್ಪಡೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ತಮಿಳುನಾಡು, ಕೇರಳದಲ್ಲಿ ಬೆಲ್ಲ ನೀಡುತ್ತಿದ್ದು, ರಾಜ್ಯದಲ್ಲಿಯೂ ಪಡಿತರ ಚೀಟಿದಾರರಿಗೆ ರೇಷನ್ ಜೊತೆಗೆ 1 ಕೆಜಿ ಬೆಲ್ಲ ವಿತರಿಸಲು ಮನವಿ ಮಾಡಲಾಗಿದೆ.