ಬೆಂಗಳೂರು: ರಾಜ್ಯದಲ್ಲಿರುವ 1.16 ಕೋಟಿ ಬಿಪಿಎಲ್ ಕಾರ್ಡ್ ಗಳ ಪೈಕಿ 3.26 ಲಕ್ಷ ಕಾರ್ಡ್ ದಾರರು ಆರು ತಿಂಗಳಿನಿಂದ ಪಡಿತರ ಪಡೆದುಕೊಂಡಿಲ್ಲ ಎಂದು ಆಹಾರ ಇಲಾಖೆ ಹೇಳಿದ್ದು, ಇಂತಹ ಪಡಿತರ ಪಡೆಯದ ಕಾರ್ಡ್ ಗಳನ್ನು ರದ್ದು ಮಾಡುವಂತೆ ಸರ್ಕಾರ ಸೂಚನೆ ನೀಡಿದೆ.
1,16,95,029 ಬಿಪಿಎಲ್ ಕಾರ್ಡ್ ಗಳ ಪೈಕಿ 3.26 ಲಕ್ಷ ಕಾರ್ಡ್ ದಾರರು ಪಡಿತರ ಪಡೆದುಕೊಂಡಿಲ್ಲ ಎಂದು ಹೇಳಲಾಗಿದೆ. ಕ್ಯಾನ್ಸರ್, ಹೃದಯ ಸಮಸ್ಯೆ ಸೇರಿ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಲು, ಆರ್‌ಟಿಇ ಅಡಿ ಮಕ್ಕಳ ಶಿಕ್ಷಣ, ಪಿಂಚಣಿ ಸೌಲಭ್ಯ ಸೇರಿ ಇತರೆ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಲಕ್ಷಾಂತರ ಮಂದಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಇವರೆಲ್ಲ ಪಡಿತರ ಪಡೆದುಕೊಳ್ಳದ ಕಾರಣ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಸುಮಾರು 60 ಕೋಟಿ ಉಳಿತಾಯವಾಗುತ್ತಿದೆ. ಹೀಗಿದ್ದರೂ ಪಡಿಸರ ಪಡೆಯದ ಕಾರ್ಡ್ ಗಳನ್ನು ರದ್ದು ಮಾಡಲು ಆಹಾರ ಇಲಾಖೆ ಮುಂದಾಗಿದೆ ಎಂದು ಹೇಳಲಾಗಿದೆ.
ಇನ್ನು ಪಡಿತರ ಪಡೆದುಕೊಳ್ಳದ ಎಪಿಎಲ್ ಕಾರ್ಡ್ ಗಳಿಗೆ ಪಡಿತರ ನೀಡುವುದನ್ನು ನಿಲ್ಲಿಸಲು ಆಹಾರ ಇಲಾಖೆ ತೀರ್ಮಾನಿಸಿದೆ ಎನ್ನಲಾಗಿದೆ.