alex Certify ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ಕಲಬುರಗಿ: ಕೋವಿಡ್-19 ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾದ ಪಡಿತರ ಚೀಟಿ ಸದಸ್ಯರ ಇ-ಕೆವೈಸಿ ಸಂಗ್ರಹಣಾ ಕಾರ್ಯ ಪುನಃ ಪುನರಾರಂಭಿಸಲಾಗಿದೆ ಎಂದು ಕಲಬುರಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಕಲಬುರಗಿ ಉಪನಿರ್ದೇಶಕರು ತಿಳಿಸಿದ್ದಾರೆ.

ಪಡಿತರ ಚೀಟಿಗಳಿಗೆ ಈಗಾಗಲೇ ಹೊಂದಾಣಿಕೆಯಾಗಿರುವ ಆಧಾರ ಕಾರ್ಡ್‍ಗಳ ದೃಢೀಕರಣ(ಇ-ಕೆವೈಸಿ) ಪ್ರಕ್ರಿಯೆಯು ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ಜಾರಿಯಲ್ಲಿರುತ್ತದೆ. ಇ-ಕೆವೈಸಿ ಪ್ರಕ್ರಿಯೆಯು ಉಚಿತವಾಗಿ ನಡೆಯಲಿದ್ದು, ಪಡಿತರ ಚೀಟಿದಾರರು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಇ-ಕೆವೈಸಿ ಮಾಡಿಸದೇ ಇರುವ ಪಡಿತರ ಚೀಟಿಗಳಿಗೆ/ ಸದಸ್ಯರಿಗೆ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪಡಿತರ ಚೀಟಿ ಸದಸ್ಯರ ಇ-ಕೆವೈಸಿ ಸಂಗ್ರಹಣಾ ಕಾರ್ಯ ಪ್ರಸ್ತುತ ಫೆಬ್ರವರಿ-2021ರ ಮಾಹೆಯಲ್ಲಿ ಪಡಿತರ ಅಂಗಡಿಗಳಲ್ಲಿ 1 ರಿಂದ 8ನೇ ತಾರೀಖಿನವರೆಗೆ ಮಾಡಲಾಗಿದೆ. ಕಚೇರಿ ಕೆಲಸಗಳು ಸುಲಲಿತವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಮುಂದಿನ 2021ರ ಮಾರ್ಚ್ ಮಾಹೆಯಿಂದ ಪ್ರತಿ ತಿಂಗಳು 1 ರಿಂದ 10ನೇ ತಾರೀಖಿನ ಅವಧಿಯಲ್ಲಿ ಸಂಗ್ರಹಣಾ ಕಾಯ ನಿರ್ವಹಿಸುವಂತೆ ಎಲ್ಲಾ ಪಡಿತರ ಅಂಗಡಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...