
ಬೆಂಗಳೂರು : ಕಮೀಷನ್ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪಡಿತರ ವಿತರಕರ ಸಂಘವು ನವೆಂಬರ್ 9 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.
ಪಡಿತರ ವಿತರಕರ ಸಂಘವು ಈ ಹಿಂದೆ ನವೆಂಬರ್ 7 ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಫ್ರೀಡಂಪಾರ್ಕ್ ನಲ್ಲಿ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಅನುಮತಿ ದೊರೆಯದ ಕಾರಣ ನವೆಂಬರ್ 9 ರಂದು ಪ್ರತಿಭಟನೆ ನಡೆಸಲಿವೆ.
ರಾಜ್ಯ ಸರ್ಕಾರವು ಪಡಿತರ ಚೀಟಿದಾರರಿಗೆ ಹಣದ ಬದಲು ಅಕ್ಕಿ ವಿತರಿಸಬೇಕು. ಪಡಿತರ ವಿತರಣೆಗೆ ನೀಡಲಾಗುವ ಕಮಿಷನ್ ಹಣವನ್ನು ಹೆಚ್ಚಿಸಬೇಕು. 2022 ರಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿದ್ದ ಕಮಿಷನ್ ಹಣ ಬಿಡುಗಡೆ ಆಗಬೇಕು ಎಂದು ಪಡಿತರ ವಿತರಕರ ಸಂಘ ಒತ್ತಾಯಿಸಿದೆ.