ಪಡಿತರ ಚೀಟಿದಾರರಿಗೆ ಸಂತಸದ ಸುದ್ದಿ ಇಲ್ಲಿದೆ. ನಿಮ್ಮ ಬಳಿಯೂ ಪಡಿತರ ಚೀಟಿ ಇದ್ದರೆ ಸರ್ಕಾರದಿಂದ ಜನವರಿ ತಿಂಗಳಲ್ಲಿ 1000 ರೂ. ರೂಪಾಯಿ ನೀಡಲಾಗುತ್ತದೆ.
ಕೇಂದ್ರ ಸರ್ಕಾರದ ಹೊರತಾಗಿ, ರಾಜ್ಯ ಸರ್ಕಾರಗಳು ಕೂಡ ಕಾಲಕಾಲಕ್ಕೆ ಬಡವರು ಮತ್ತು ನಿರ್ಗತಿಕರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತವೆ. ತಮಿಳುನಾಡು ಸರ್ಕಾರ ಪಡಿತರ ಚೀಟಿ ಹೊಂದಿದ ರಾಜ್ಯದ ಜನತೆಗೆ 1000 ರೂ. ನೀಡುವುದಾಗಿ ಘೋಷಿಸಿದೆ.
ರಾಜ್ಯದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮುಂದಿನ ತಿಂಗಳು ಪೊಂಗಲ್ ಹಬ್ಬದಂದು ಪಡಿತರ ಚೀಟಿದಾರರಿಗೆ 1,000 ರೂಪಾಯಿ ನೀಡುವಂತೆ ಸೂಚಿಸಿದ್ದಾರೆ.
ಮುಂದಿನ ತಿಂಗಳು ಪೊಂಗಲ್ ಸಂದರ್ಭದಲ್ಲಿ ಪಡಿತರ ಚೀಟಿದಾರರಿಗೆ 1000 ರೂಪಾಯಿ ನೀಡುವುದಾಗಿ ಆದೇಶ ಹೊರಡಿಸಲಾಗಿದೆ. ರಾಜ್ಯ ಸರ್ಕಾರ ಪೊಂಗಲ್ ಹಬ್ಬದಂದು ಬಡವರಿಗೆ ಪ್ರತಿ ವರ್ಷ ಒಂದಷ್ಟು ಮೊತ್ತವನ್ನು ನೀಡುತ್ತದೆ. ಇದರೊಂದಿಗೆ ಅಕ್ಕಿ, ಸಕ್ಕರೆ ಮುಂತಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ.
ಸರ್ಕಾರದ ಹೇಳಿಕೆ ಪ್ರಕಾರ, 1000 ರೂಪಾಯಿ ನೀಡುವುದರ ಜೊತೆಗೆ, ಫಲಾನುಭವಿಗಳಿಗೆ ಒಂದು ಕೆಜಿ ಅಕ್ಕಿ ಮತ್ತು ಒಂದು ಕೆಜಿ ಸಕ್ಕರೆಯನ್ನು ಸಹ ನೀಡಲಾಗುತ್ತದೆ.
ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಸುಮಾರು 2.19 ಕೋಟಿ ಕಾರ್ಡ್ದಾರರು ಪ್ರಯೋಜನ ಪಡೆಯಲಿದ್ದಾರೆ. ಬೊಕ್ಕಸಕ್ಕೆ ಸುಮಾರು 2356.67 ಕೋಟಿ ರೂ. ಹೊರೆ ಬೀಳಲಿದೆ. ಜನವರಿ 2 ರಂದು ಸ್ಟಾಲಿನ್ ಪೊಂಗಲ್ ಉಡುಗೊರೆ ಯೋಜನೆಗೆ ಚಾಲನೆ ನೀಡಲಿದ್ದು, ಜನವರಿ 15 ರಂದು ಹಬ್ಬ ಆಚರಿಸಲಾಗುವುದು.
2015ರಲ್ಲಿ ರಾಜ್ಯ ಸರ್ಕಾರ ಗಿಫ್ಟ್ ಬ್ಯಾಗ್ ನೀಡಿತ್ತು. 2019 ರಲ್ಲಿ ರಾಜ್ಯದ ಅಗತ್ಯವಿರುವವರಿಗೆ 1000 ರೂ. ನಗದು ಮೊತ್ತ ಖಾತೆಗೆ ವರ್ಗಾಯಿಸಲಾಯಿತು, 2020 ರಲ್ಲಿ 2500 ಮತ್ತು 2021 ರಲ್ಲಿ 2500 ರೂ. ಮೊತ್ತವನ್ನು ಸರ್ಕಾರ ನೀಡಿದ್ದು, ಇದರೊಂದಿಗೆ ಅಕ್ಕಿ, ಕಬ್ಬು ಮತ್ತು ಸಕ್ಕರೆಯನ್ನು ಸಹ ಉಡುಗೊರೆಯಾಗಿ ನೀಡಲಾಗುತ್ತದೆ. ಇದನ್ನು ಮೊದಲಿಗೆ ಜನವರಿ 2014 ರಲ್ಲಿ ಪ್ರಾರಂಭಿಸಲಾಯಿತು.