
ಬೆಂಗಳೂರು: ಮಕ್ಕಳನ್ನು ಶಾಲೆಗೆ ಸೇರಿಸಲು ಪಡಿತರ ಚೀಟಿ ಬೇಕಿಲ್ಲ. 2021 -22 ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆ ದಾಖಲಾತಿ ವೇಳೆ ವಿದ್ಯಾರ್ಥಿಗಳು ಪೋಷಕರು ಕಡ್ಡಾಯವಾಗಿ ಪಡಿತರ ಚೀಟಿ ನೀಡಬೇಕು ಎಂಬ ನಿಯಮವನ್ನು ಸರ್ಕಾರ ಹಿಂಪಡೆದುಕೊಂಡಿದೆ.
ಪಡಿತರ ಚೀಟಿ ಇದ್ದವರು ಪಡಿತರ ಚೀಟಿ ನೀಡಬಹುದು. ಇಲ್ಲದಿದ್ದರೆ ಆಧಾರ್ ಸಂಖ್ಯೆ ನೀಡಬಹುದು ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಪಡಿತರ ಚೀಟಿ ಕಡ್ಡಾಯ ಮಾಡಿದ ಕಾರಣ ಪೋಷಕರಲ್ಲಿ ಗೊಂದಲವುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ ಎನ್ನಲಾಗಿದೆ.