ಅಲ್ಪ ಆದಾಯದ ವರ್ಗಕ್ಕೆ ಸೇರುವ ಕುಟುಂಬಗಳಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್‌ನಷ್ಟೇ ಬಹು ಮುಖ್ಯವಾದ ದಾಖಲೆಯಾಗಿದೆ. ಆಹಾರ ಧಾನ್ಯಗಳಿಂದ ಅಡುಗೆ ಅನಿಲ ಸೇರಿ ಅನೇಕ ಅತ್ಯಾವಶ್ಯಕ ಸೇವೆಗಳನ್ನು ಪಡೆಯಲು ಬೇಕಾದ ರೇಷನ್ ಕಾರ್ಡ್ ಇಂದಿನ ತಂತ್ರಜ್ಞಾನಕ್ಕೆ ತಕ್ಕಂತೆ ಮಾರ್ಪಾಡಾಗುತ್ತಿದೆ.
ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ರೇಷನ್ ಕಾರ್ಡ್ ಸೇವೆಗಳನ್ನು ಪೂರೈಸಲು ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ಪೂರೈಕೆ ಇಲಾಖೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗಳು ಮುಂದಾಗಿವೆ.
BIG NEWS: ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಹೇಳಿ ಟಿಎಂಸಿ ಸೇರ್ಪಡೆಯಾದ ಮಾಜಿ ಕೇಂದ್ರ ಸಚಿವ
ಈ ಸೇವೆಗಳ ಮೂಲಕ ದೇಶಾದ್ಯಂತ ಇರುವ 3.7 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ರೇಷನ್ ಕಾರ್ಡ್ ಸೇವೆಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು.
ಈ ಪಾಲುದಾರಿಕೆಯಿಂದಾಗಿ 23.64 ಕೋಟಿ ರೇಷನ್ ಕಾರ್ಡ್‌ದಾರರಿಗೆ ಅನುಕೂಲವಾಗುವ ನಿರೀಕ್ಷೆ ಇದೆ.
ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ರೇಷನ್ ಕಾರ್ಡ್ ವಿವರಗಳನ್ನು ಅಪ್ಡೇಟ್ ಮಾಡಬಹುದಾಗಿದ್ದು, ಆಧಾರ್ ಲಿಂಕಿಂಗ್ ಸಹ ಮಾಡಬಹುದಾಗಿದೆ. ನಿಮ್ಮ ರೇಷನ್ ಕಾರ್ಡ್‌ನ ಛಾಯಾ ಪ್ರತಿಯನ್ನೂ ಸಹ ಪಡೆಯಬಹುದಾಗಿದೆ. ಜೊತೆಗೆ ರೇಷನ್ ಲಭ್ಯತೆಯನ್ನು ಸಹ ಪರೀಕ್ಷಿಸಿ ನೋಡಬಹುದಾಗಿದೆ.
ರೇಷನ್ ಕಾರ್ಡ್ ಸಂಬಂಧ ದೂರುಗಳಿದ್ದರೆ ಸಾಮಾನ್ಯ ಸೇವಾ ಕೇಂದ್ರದ ಮೂಲಕ ಸಲ್ಲಿಸಬಹುದಾಗಿದೆ. ಒಂದು ವೇಳೆ ರೇಷನ್ ಕಾರ್ಡ್ ಕಳೆದುಹೋದಲ್ಲಿ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
ತಂತ್ರಜ್ಞಾನ ಆಧಾರಿತ ಹೊಸ ಹೊಸ ವ್ಯವಸ್ಥೆಗಳು ಜಾರಿಗೆ ಬರುತ್ತಿದ್ದು, ಸಾಮಾನ್ಯ ಜನರಿಗೆ ಒಂದಷ್ಟು ಅನುಕೂಲ ಆಗಬಹುದೆಂಬ ನಿರೀಕ್ಷೆ ಇದೆ.