ಪಡಿತರ ಚೀಟಿ ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ. ಪಡಿತರ ಚೀಟಿದಾರರಿಗೆ ಮಹತ್ವದ ಸುದ್ದಿಯೊಂದಿದೆ. ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರ, ಮುಂಚಿತವಾಗಿ ಪಡಿತರ ಚೀಟಿ ನೀಡುತ್ತದೆ. ಪಡಿತರ ಚೀಟಿಗೆ ಮೊಬೈಲ್ ನಂಬರ್ ಸೇರಿಸುವುದು ಅನಿವಾರ್ಯ.
ಮೊಬೈಲ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದರೆ ಅಥವಾ ಸಂಖ್ಯೆಯನ್ನು ಬದಲಾಯಿಸಿದ್ದರೆ ಅಥವಾ ಕಾರ್ಡ್ ನವೀಕರಿಸದಿದ್ದರೆ, ಮೊಬೈಲ್ ಸಂಖ್ಯೆಯನ್ನು ವಿಳಂಬ ಮಾಡದೆ ಪಡಿತರ ಚೀಟಿಯಲ್ಲಿ ನವೀಕರಿಸಬೇಕು.
ಪಡಿತರ ಚೀಟಿಯಲ್ಲಿ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡುವುದು ತುಂಬಾ ಸುಲಭ. ಮನೆಯಲ್ಲಿ ಕುಳಿತು ಬಹಳ ಸುಲಭವಾಗಿ ಮಾಡಬಹುದು. ಪಡಿತರ ಚೀಟಿಯಲ್ಲಿ ಮೊಬೈಲ್ ಸಂಖ್ಯೆಯನ್ನು ಸೇರಿಸಲು ಮೊದಲು https://nfs.delhi.gov.in/Citizen/UpdateMobileNumber.aspx. ಗೆ ಭೇಟಿ ನೀಡಬೇಕು. ತೆರೆದುಕೊಳ್ಳುವ ಪುಟದಲ್ಲಿ, ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡುವ ಆಯ್ಕೆ ಕಾಣಿಸುತ್ತದೆ. ಅದ್ರ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಕಾಣಿಸುವ ಕಾಲಂ ಭರ್ತಿ ಮಾಡಬೇಕು. ಮನೆಯ ಮುಖ್ಯಸ್ಥ, ಆಧಾರ್ ಸಂಖ್ಯೆ ನಮೂದಿಬೇಕು. ಎರಡನೇ ಅಂಕಣದಲ್ಲಿ ಪಡಿತರ ಚೀಟಿ ಸಂಖ್ಯೆ ಬರೆಯಬೇಕು. ಮೂರನೇ ಕಾಲಂನಲ್ಲಿ ಮನೆಯ ಮುಖ್ಯಸ್ಥರ ಹೆಸರನ್ನು ಬರೆಯಬೇಕು. ಕೊನೆಯ ಕಾಲಂನಲ್ಲಿ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಅದನ್ನು ಸೇವ್ ಮಾಡಬೇಕು.
ಆಗ ನಿಮ್ಮ ಮೊಬೈಲ್ ಸಂಖ್ಯೆ ನವೀಕರಣಗೊಳ್ಳುತ್ತದೆ. ರೇಷನ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಆಗಿದ್ದಲ್ಲಿ, ರೇಷನ್ ಕಾರ್ಡ್ ಗೆ ಸಂಬಂಧಿಸಿದ ಎಲ್ಲ ಮಾಹಿತಿ ನಿಮಗೆ ಲಭ್ಯವಾಗುತ್ತದೆ.
2020 ರ ಜೂನ್ 1 ರಿಂದ ದೇಶದ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಡಿತರ ಚೀಟಿ ಪೋರ್ಟಬಿಲಿಟಿ ಸೇವೆ ಒಂದು ರಾಷ್ಟ್ರ-ಒಂದು ಪಡಿತರ ಚೀಟಿ ಆರಂಭವಾಗಿದೆ. ಈ ಯೋಜನೆಯಡಿ, ಯಾವುದೇ ರಾಜ್ಯದಲ್ಲಿಯಾದ್ರೂ ಪಡಿತರ ಖರೀದಿ ಮಾಡಬಹುದು. ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನ, ಕರ್ನಾಟಕ, ಕೇರಳ, ಮಧ್ಯ ಪ್ರದೇಶ, ಗೋವಾ, ಜಾರ್ಖಂಡ್, ತ್ರಿಪುರಾ, ಬಿಹಾರ, ಉತ್ತರ ಪ್ರದೇಶ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ದಮನ್-ದಿಯುಗಳಲ್ಲಿ ಒಂದು ರಾಷ್ಟ್ರ-ಒಂದು ಪಡಿತರ ಚೀಟಿ ಸೇವೆ ಆರಂಭವಾಗಿದೆ.