ಕೇಂದ್ರ ಸರ್ಕಾರ ಪ್ರತಿಯೊಬ್ಬರಿಗೂ ಇನ್ನು ಮುಂದೆ ನ್ಯಾಯಬೆಲೆ ಅಂಗಡಿಯಲ್ಲಿ ಪ್ರಿಂಟೆಡ್ ಬಿಲ್ ಕೊಡಬೇಕು ಎಂದು ಘೋಷಣೆ ಮಾಡಿದೆ.
ಹೌದು. ಇದುವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆದ ಬಳಿಕ ಕೈಯಲ್ಲಿ ಬಿಲ್ ಬರೆದು ಕೊಡಲಾಗುತ್ತಿತ್ತು, ಇದೀಗ ಪ್ರಿಂಟೆಡ್ ಬಿಲ್ ಕೊಡಲು ಸೂಚನೆ ನೀಡಿದೆ. ಇದರಲ್ಲಿ ಯಾವ ಪಡಿತರ ಎಷ್ಟು..? ಎಂಬ ಮಾಹಿತಿ ಇರುತ್ತದೆ. ಪಡಿತರ ಸದಸ್ಯರು ಹಾಗೂ ಕೇಂದ್ರ ಸರ್ಕಾರದ ಅನುದಾನ ಹಾಗೂ ರಾಜ್ಯ ಸರ್ಕಾರದ ಅನುದಾನದ ವಿವರ ಇದರಲ್ಲಿ ಕಾಣಬಹುದು. ಸದ್ಯ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ನೀಡಲಾಗುತ್ತಿದ್ದು, ಉಳಿದ 5 ಕೆಜಿ ಅಕ್ಕಿ ಬದಲು ಹಣ ನೀಡಲಾಗುತ್ತಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿರುವುದರಿಂದ ಈ ಯೋಜನೆಯ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ರಶೀದಿ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಯೋಜನೆಯ ಹೆಸರು, ಜಿಲ್ಲೆ, ತಾಲೂಕು, ಫಲಾನುಭವಿಯ ಹೆಸರು, ಒಟ್ಟು ಸದಸ್ಯರ ಸಂಖ್ಯೆ, ಹಂಚಿಕೆಯ ದಿನಾಂಕ, ಆಹಾರ ಧಾನ್ಯದ ವಿವರ ಹಾಗೂ ಇದಕ್ಕೆ ತಗಲುವ ವೆಚ್ಚ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ ಎಷ್ಟು ಎಂಬುದು ಸೇರಿದಂತೆ ಹಲವು ಮಾಹಿತಿ ಮುದ್ರಿತ ರಶೀದಿಯಲ್ಲಿರಲಿದೆ.
ಇನ್ನೂ, ಮುಖ್ಯದ ವಿಚಾರ ಅಂದರೆ ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಗೆ ಲಿಂಕ್ ಮಾಡಲು ಕೇಂದ್ರ ಸರ್ಕಾರವು ಡಿಸೆಂಬರ್ 31 ರವರೆಗೆಅವಕಾಶ ನೀಡಿದೆ. ಈ ಮೂಲಕ ಅನರ್ಹ ವ್ಯಕ್ತಿಗಳು ಅನೇಕ ಪಡಿತರ ಚೀಟಿಗಳನ್ನು ಪಡೆಯುವ ಸಂದರ್ಭಗಳನ್ನು ತಡೆಯಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ. ಅರ್ಹವ್ಯಕ್ತಿಗಳು ಮಾತ್ರ ಸಬ್ಸಿಡಿ ಇಂಧನ / ಆಹಾರ ಧಾನ್ಯಗಳನ್ನು ಪಡೆಯುತ್ತಾರೆ ಎಂದು ಇದು ಖಚಿತಪಡಿಸುತ್ತದೆ.