ನವದೆಹಲಿ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಚಿಂದಿ ಆಯುವವರು, ಬೀದಿಯಲ್ಲಿ ವಾಸಿಸುವವರು, ವಲಸೆ ಕಾರ್ಮಿಕರು ಸೇರಿದಂತೆ ನಗರ, ಗ್ರಾಮಾಂತರ ಪ್ರದೇಶದ ಬಡವರಿಗೆ ಪಡಿತರ ಚೀಟಿ ವಿತರಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಪಡಿತರ ಚೀಟಿ ಪಡೆಯಲು ವಿಳಾಸದ ದಾಖಲೆ ಇಲ್ಲದ ಕಾರಣ ಕಡುಬಡವರು ರೇಷನ್ ಕಾರ್ಡ್ ಪಡೆಯಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಅಂತಹವರು ವಂಚಿತರಾಗುತ್ತಿದ್ದಾರೆ. ಅವರಿಗೆ ಪಡಿತರ ಚೀಟಿ ವಿತರಿಸುವ ಅಭಿಯಾನಕ್ಕೆ ಕೂಡಲೇ ಚಾಲನೆ ನೀಡಬೇಕೆಂದು ಕೇಂದ್ರ ಸರ್ಕಾರದ ವತಿಯಿಂದ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ.
ಸಬ್ಸಿಡಿ ದರದಲ್ಲಿ ಸಿಗುವ ಆಹಾರಧಾನ್ಯ ಪಡೆಯಲು ಬಡವರು ಹಲವು ತೊಂದರೆ ಎದುರಿಸುತ್ತಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಬಡವರು, ರಸ್ತೆ ಬದಿಯಲ್ಲಿ ವಾಸಿಸುವವರು, ಚಿಂದಿ ಆಯುವವರು, ವಲಸೆ ಕಾರ್ಮಿಕರಿಗೆ ವಿಳಾಸದ ದಾಖಲೆ ಇಲ್ಲದ ಕಾರಣಕ್ಕೆ ಪಡಿತರಚೀಟಿ ನೀಡಿಲ್ಲ. ವಿಶೇಷ ಅಭಿಯಾನದ ಮೂಲಕ ಅಂತವರನ್ನು ಗುರುತಿಸಿ ಪಡಿತರಚೀಟಿ ವಿತರಿಸಬೇಕೆಂದು ಸೂಚನೆ ನೀಡಲಾಗಿದೆ.