ಕೊಪ್ಪಳ: ಪಡಿತರ ಕಾರ್ಡುಗಳ ತಿದ್ದುಪಡಿಗೆ ಆಹಾರ ತಂತ್ರಾಂಶದಲ್ಲಿ ಅಕ್ಟೋಬರ್ 11ರಿಂದ ಅ. 13ರ ವರೆಗೆ ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.
ಕಾರ್ಡುದಾರರು ಸಮೀಪದ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಈ ಅವಧಿಯಲ್ಲಿ (ಅ.11ರಿಂದ ಅ.13ರವರೆಗೆ) ಪಡಿತರ ಕಾರ್ಡುಗಳ ತಿದ್ದುಪಡಿ ಮಾಡಿಕೊಳ್ಳಲಾದ ಮನವಿಯನ್ನು ಆಹಾರ ನಿರೀಕ್ಷಕರ ಲಾಗಿನ್ನಲ್ಲಿ ಅನುಮೊದನೆಗೆ ಸಲ್ಲಿಸಲು ಅಕ್ಟೋಬರ್ 20ರ ಸಂಜೆ 7 ಗಂಟೆಯವರೆಗೆ ಅವಕಾಶವಿರುತ್ತದೆ.
ಡಿಬಿಟಿ ಯೋಜನೆಗೆ ಸಂಬಂಧಿಸಿದಂತೆ, ಪಡಿತರ ಚೀಟಿಗಳ ಎನ್.ಪಿ.ಸಿ.ಐ ಬ್ಯಾಂಕ್ ವೆರೆಫಿಕೇಶನ್ ಮತ್ತು ಆಧಾರ್ ಅಥೆಂಟಿಕೇಶನ್ ಫೇಲ್ಡ್ ಪ್ರಕರಣಗಳ ಕುಟುಂಬದ ಮುಖ್ಯಸ್ಥರು ಸಂಬಂಧಿಸಿದ ಬ್ಯಾಂಕುಗಳಿಗೆ ಭೇಟಿ ನೀಡಿ ಬ್ಯಾಂಕ್ ಖಾತೆಗಳನ್ನು ಸರಿಪಡಿಸಿಕೊಳ್ಳುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.